ADVERTISEMENT

ನಾನೊಬ್ಬಳು ಬೋಲ್ಡ್‌ ನಟಿ: ರಾಧಿಕಾ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ನಟಿ ರಾಧಿಕಾ ಆಪ್ಟೆ
ನಟಿ ರಾಧಿಕಾ ಆಪ್ಟೆ   

‘ಪಾರ್ಚ್‌ಡ್‌’ ಎಂಬ ಹಿಂದಿಚಿತ್ರದಲ್ಲಿ ನಟಿ ರಾಧಿಕಾ ಆಪ್ಟೆಯ ಚುಂಬನ ದೃಶ್ಯವನ್ನು ಸೆನ್ಸಾರ್‌ ಮಂಡಳಿ ತೆಗೆದುಹಾಕಿದೆ. ಯಾವುದೇ ದೃಶ್ಯ ಮಂಡಳಿ ತೆಗೆದುಹಾಕಿದರೆ ಅದೇನೂ ದೊಡ್ಡ ವಿಷಯವಲ್ಲ. ಆದರೆ ಈ ಚಿತ್ರ ರಾಧಿಕಾಳ ಕೆಲವೊಂದು ದೃಶ್ಯಗಳಿಂದಾಗಿ ‘ಪೋರ್ನ್‌ ಚಿತ್ರ’ ಎನಿಸಿಕೊಂಡು ಭಾರಿ ಸುದ್ದಿ ಮಾಡಿದ್ದು ಇದರಿಂದ ಆಕೆ ತುಂಬಾ ನೊಂದುಕೊಂಡಿದ್ದಾರೆ.

ಈ ದೃಶ್ಯ ‘ಪೋರ್ನ್‌’ ಎನಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅವರಿಗೆ ತುಂಬಾ ನೋವು ಉಂಟುಮಾಡಿದೆಯಂತೆ. ಇದರಲ್ಲಿ ನಟ ಆದಿಲ್‌ ಹುಸೇನ್‌ ಜೊತೆ ನಗ್ನವಾಗಿ ಚುಂಬಿಸಿರುವ ದೃಶ್ಯವಿದೆ.

‘ನಾನೊಬ್ಬಳು ಬೋಲ್ಡ್‌ ನಟಿ. ನಾನು ನಟಿಸುವ ಅನೇಕ ಚಿತ್ರಗಳ ಹಲವು ದೃಶ್ಯಗಳನ್ನು ಸೆನ್ಸಾರ್‌ ಮಂಡಳಿಯವರು ತೆಗೆದುಹಾಕುತ್ತಾರೆ. ಅದರಿಂದ ನನಗೇನೂ ಬೇಸರವಿಲ್ಲ.

ನಾನು ನನ್ನ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಅಷ್ಟೇ. ನನ್ನಿಂದ ಇಂಥದ್ದೇ ಪಾತ್ರಗಳನ್ನು ನಿರ್ದೇಶಕರೂ ಬಯಸುತ್ತಾರೆ. ಆದರೆ ಕೆಲವು ವೇಳೆ ಅದ್ಯಾಕೋ ಸೆನ್ಸಾರ್‌ ಬೋರ್ಡ್‌ಗೆ ಸರಿ ಕಾಣಿಸುತ್ತಿಲ್ಲ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಆದರೆ ಈ ರೀತಿ ನನ್ನ ಹೆಸರಿಗೆ ಕಳಂಕ ಬರುವಂತೆ ಮಾಡುವುದು ಸರಿಯಲ್ಲ’ ಎಂದು ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸದ್ಯ ಹಾಟೆಸ್ಟ್‌, ಸೆಕ್ಸಿಯಸ್ಟ್‌ ತಾರೆ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ ರಾಧಿಕಾ ಈ ಪ್ರಕರಣದಿಂದಾಗಿ ಜನರ ಮೇಲೂ ಭಾರೀ ಕೋಪಗೊಂಡಿದ್ದಾರೆ. ‘ಜನರಿಗೇನು ಬಿಡಿ. ಅವರಿಗೆ ಏನು ಬೇಕೋ ಅದನ್ನಷ್ಟೇ ನೋಡುತ್ತಾರೆ, ಕೇಳುತ್ತಾರೆ. ಏನು ಬೇಕೋ ಎನ್ನುವುದಕ್ಕಿಂತ ಏನು ಬೇಡವೋ ಅದನ್ನು ಅನ್ನುವುದು ಒಳ್ಳೆಯದು. ಜನರಿಗೆ ತಾಕತ್ತು ಇದ್ದರೆ ಮೊದಲು ನನ್ನ ನಟನೆ ನೋಡಲಿ.

ಸಂಪೂರ್ಣ ಚಿತ್ರದಲ್ಲಿ ಅಲ್ಲೊಂದು ಇಲ್ಲೊಂದು ದೃಶ್ಯಗಳು ಚುಂಬನ, ಸೆಕ್ಸ್‌ ಸಂಬಂಧದಾಗಿದ್ದರೆ ಅದನ್ನೇ ದೊಡ್ಡ ವಿಷಯ ಮಾಡುತ್ತಾರೆ’ ಎಂದು ಕಿಡಿಕಾರಿದ್ದಾರೆ. ‘ಒಂದು ವೇಳೆ ಜನರಿಗೆ ಚಿತ್ರ ನೋಡಲು ಇಷ್ಟ ಇಲ್ಲದಿದ್ದರೆ ಮನೆಯಲ್ಲಿ ಇರಲಿ, ಚಿತ್ರವನ್ನು ನೋಡುವುದೇಕೆ, ಅದರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದೇಕೇ? ನಾವೇನು ಅವರಿಗೆ ನನ್ನ ಚಿತ್ರ ನೋಡಿ ಅಂತ ಒತ್ತಾಯ ಏನೂ ಮಾಡಿಲ್ವಲ್ಲ’? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಂದಹಾಗೆ. ಈ ದೃಶ್ಯ ಲೀಕ್‌ ಆಗಿರುವ ಕುರಿತು ನಿರ್ಮಾಪಕ ಆಸೀಂ ಬಜಾಜ್‌ ಅವರು ಸೈಬರ್‌ ಪೊಲೀಸರಲ್ಲಿ ದೂರು ದಾಖಲಿಸಿದ್ದು ಅದಿನ್ನೂ ತನಿಖಾ ಹಂತದಲ್ಲಿದೆ. ಕಬಾಲಿ ಚಿತ್ರದ ನಂತರ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ ರಾಧಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.