ADVERTISEMENT

ನಾವು ಯಾರ್‍ಗೂ ಕಮ್ಮಿಯಿಲ್ಲ!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ನಾವು ಯಾರ್‍ಗೂ ಕಮ್ಮಿಯಿಲ್ಲ!
ನಾವು ಯಾರ್‍ಗೂ ಕಮ್ಮಿಯಿಲ್ಲ!   

‘ಬಾಯ್ಸ್‌ ಈಕ್ವಲ್ ಗರ್ಲ್ಸ್’– ಈ ಸ್ಲೋಗನ್ ಈಗ ಸಾಮಾಜಿಕ ಜಾಲತಾಣ ಗಳಲ್ಲಿ ಸದ್ದು ಮಾಡುತ್ತಿರುವ ಸುದ್ದಿ. ಆ ಸುದ್ದಿ ಇನ್ನಷ್ಟು ಚುರುಕು ಪಡೆದುಕೊಂಡಿರುವುದು ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಟಿ–ಶರ್ಟ್ ತೊಟ್ಟ ನಂತರ.

‘ಲಿಂಗಸಮಾನತೆ’ಯ ಕುರಿತು ಜಾಗೃತಿ ಮೂಡಿಸುವ ಹೊಸ ರೂಪವಾಗಿ ಈ ಟಿ–ಶರ್ಟ್ ವಿನ್ಯಾಸಗೊಂಡಿದೆಯಂತೆ. ಈ ಮೂಲಕ ವಿಷಯದ ಕುರಿತು ಚರ್ಚೆಗೂ ಅವಕಾಶ ನೀಡಲಾಗಿದೆ.

‘ಮಿಕ್ಸ್’ ಎಂಬ ವೆಬ್ ಸಂಸ್ಥೆ ಈ ಟಿ–ಶರ್ಟ್‌ನ ರೂವಾರಿ. ಲಿಂಗಸಮಾನತೆಯ ವಿಷಯವನ್ನು ಸಮಾಜದಲ್ಲಿ ಮುನ್ನೆಲೆಗೆ ತರಲು ಈ ಒಂದು ಪ್ರಯತ್ನವನ್ನು ಮಾಡಿದೆಯಂತೆ.

ADVERTISEMENT

‘ಈ ಟೀ–ಶರ್ಟ್ ಧರಿಸುವುದರಿಂದ ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಬಹುದು. ಇದು ಸಂದೇಶ ಸಾರುವ ಸುಲಭ ವಿಧಾನವೂ ಹೌದು’ ಎಂದು ಹೇಳಿಕೊಂಡಿದೆ ತಂಡ. ಜೊತೆಗೆ ಲಿಂಗ ತಾರತಮ್ಯ ಅನುಭವಿಸಿದ ಸ್ವಕಥನಗಳನ್ನು, ಕಂಡು ಕೇಳಿದ ಕಥೆಗಳನ್ನು ಹೇಳಿಕೊಳ್ಳಲೂ ಅವಕಾಶವನ್ನು ವೆಬ್‌ತಾಣದಲ್ಲಿ ಕಲ್ಪಿಸಿದೆ. ಸಾಕಷ್ಟು ಕಥೆಗಳೂ ಬಂದು ಮುಟ್ಟಿವೆ.

ಜಾಗೃತಿ ಮೂಡಬೇಕು, ಜೊತೆಗೆ ಅದು ಸುಲಭ ಹಾಗೂ ಖುಷಿ ನೀಡುವಂತಿರಬೇಕು. ಅದು ನಮ್ಮ ಜೀವನಶೈಲಿಯಲ್ಲೂ ಒಂದಾಗಿರಬೇಕು ಎಂಬ ಎಲ್ಲಾ ಅಂಶಗಳನ್ನು ಒಗ್ಗೂಡಿಸಿಯೇ ಟಿ–ಶರ್ಟ್ ಮೂಲಕ ಅದನ್ನು ಪ್ರಚುರಪಡಿಸುತ್ತಿದ್ದಾರಂತೆ. ‘ಜುದ್ವಾ 2‘ ಸಿನಿಮಾ ಪ್ರಚಾರಕ್ಕೆ ಬಂದಿದ್ದ ಜಾಕ್ವೆಲಿನ್ ಕೂಡ ‘ಬಾಯ್ಸ್‌ ಈಕ್ವಲ್‌ ಗರ್ಲ್ಸ್‌’ ಸಂದೇಶ ಹೊತ್ತ ಈ ಅಚ್ಚ ಬಿಳುಪಿನ ಟಿ–ಶರ್ಟ್‌ನಲ್ಲಿ ಮಿಂಚಿ, ನಗುವಿನ ಮೂಲಕವೇ ನಿಲುವನ್ನೂ ತಿಳಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.