ADVERTISEMENT

ನಿದ್ದೆ ಮಾಡಲು ಜಿಮ್

​ಪ್ರಜಾವಾಣಿ ವಾರ್ತೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ನಿದ್ದೆ ಮಾಡಲು ಜಿಮ್
ನಿದ್ದೆ ಮಾಡಲು ಜಿಮ್   

ಜಿಮ್‌ಗೆ ಹೋಗುವುದು ಏಕೆ? ದೇಹ ದಂಡಿಸಲು. ಥರಾವರಿ ಉಪಕರಣಗಳಲ್ಲಿ ವ್ಯಾಯಾಮ ಮಾಡಲು. ಆದರೆ ಈ ಜಿಮ್‌ನಲ್ಲಿ ಹಾಗಿಲ್ಲ. ಇಲ್ಲಿ ಅಂಥ ಯಾವ ಉಪಕರಣಗಳೂ ಇಲ್ಲ. ಇರುವುದು ವಿಶಾಲ ಮೆತ್ತನೆಯ ಹಾಸಿಗೆಗಳಷ್ಟೆ.

ಲಂಡನ್‌ನಲ್ಲಿರುವ ಈ ಜಿಮ್ ಹೆಸರು ಡೇವಿಡ್ ಲಾಯ್ಡ್‌ ಜಿಮ್. ಎಕ್ಸರ್‌ಸೈಸ್‌ನಂತೆ ನೇಪರ್‌ಸೈಸ್‌ (ನಿದ್ರೆ ವ್ಯಾಯಾಮ) ಈಗ ಇಲ್ಲಿ ಹೆಚ್ಚು ಪ್ರಚಲಿತ. ಅದಕ್ಕೆಂದೇ ಈ ಜಿಮ್‌ ವಿನ್ಯಾಸಗೊಳಿಸಲಾಗಿದೆ. ಇಲ್ಲಿಗೆ ಬರುವವರು ದೇಹ ದಂಡಿಸಬೇಕಿಲ್ಲ. ಬದಲಿಗೆ ಮಧ್ಯಾಹ್ನದ ಸಮಯ 45 ನಿಮಿಷ ಎಲ್ಲಾ ಚಿಂತೆ ಬಿಟ್ಟು ಆರಾಮಾಗಿ ಮಲಗಬಹುದು. ಅದೇಕೆ ಹೀಗೆ ಎಂದು ಪ್ರಶ್ನಿಸುತ್ತಲೇ ಅಲ್ಲಿಗೆ ಹೋಗುವವರ ಸಂಖ್ಯೆಯೂ ಈಗ ಹೆಚ್ಚಾಗಿದೆಯಂತೆ.

ಆಧುನಿಕ ಜೀವನಶೈಲಿಯ ಕೊಡುಗೆಗಳಾದ ನಿದ್ರಾಹೀನತೆ, ಏಕಾಗ್ರತೆ ಕೊರತೆ, ಆತಂಕ, ಖಿನ್ನತೆಗಳಂಥ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನೀಗಿಸುವ ಉದ್ದೇಶದಿಂದಲೇ ಈ ಜಿಮ್ ನಿರ್ಮಾಣವಾಗಿದೆಯಂತೆ.

ಮಲಗುವುದರಿಂದ ದೇಹಕ್ಕೆ, ಮನಸ್ಸಿಗೆ ದೊರೆಯಬಹುದಾದ ಸಾಕಷ್ಟು ಪ್ರಯೋಜನಗಳ ಕುರಿತು ಜನರನ್ನು ಚಿಂತನೆಗೆ ಹಚ್ಚುತ್ತಾ, ಮೆದುಳನ್ನು ಪುನಶ್ಚೇತನಗೊಳಿಸುವ ಜೊತೆಜೊತೆಗೆ ದೇಹದಲ್ಲಿನ ಕ್ಯಾಲೊರಿ ಕರಗಿಸುವಂತೆಯೇ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.  

ಸೊಂಪಾದ ನಿದ್ದೆ ನಂತರ 15 ನಿಮಿಷ ಸ್ಟ್ರೆಚಿಂಗ್ ವ್ಯಾಯಾಮ ಹೇಳಿಕೊಡಲಾಗುತ್ತದೆ. ಇದರಿಂದ ಕ್ಯಾಲೊರಿಯು ಪರಿಣಾಮಕಾರಿಯಾಗಿ ಕರಗುತ್ತದೆಯಂತೆ. ಕಷ್ಟಪಡದೇ ದೇಹವನ್ನು ಫಿಟ್ ಆಗಿಡಲು ಯಾರಿಗಿಷ್ಟವಿಲ್ಲ ಹೇಳಿ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.