ADVERTISEMENT

ನೀರ್ಗಲ್ಲು ಒಡೆಯುವ ಹಡಗು

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ನೀರ್ಗಲ್ಲು ಒಡೆಯುವ ಹಡಗು
ನೀರ್ಗಲ್ಲು ಒಡೆಯುವ ಹಡಗು   

ನೀರ್ಗಲ್ಲನ್ನು ಒಡೆಯಬಲ್ಲ ಶಕ್ತಿಶಾಲಿ ಹಡಗೊಂದನ್ನು ರಷ್ಯಾ ನಿರ್ಮಿಸಿದೆ. ಇದರ ಹೆಸರು ‘ಇಲ್ಯಾ ಮುರೊಮೆಟ್ಸ್ ಮಿಲಿಟರಿ ಐಸ್ ಬ್ರೇಕರ್’. 2016 ಜೂನ್ 10ರಂದು ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ  ಇದನ್ನು ಉದ್ಘಾಟನೆಗೊಳಿಸಲಾಗಿದೆ.

ಇದರ ವಿಶೇಷತೆ ಎಂದರೆ ಸುಮಾರು 12ಸಾವಿರ ನಾವಿಕ ಮೈಲು ದೂರ ವ್ಯಾಪ್ತಿಯವರೆಗೂ ಕಾರ್ಯಾಚರಣೆ ನಡೆಸಬಲ್ಲ ಶಕ್ತಿ ಹೊಂದಿದೆ, ಡೀಸೆಲ್ ಎಲೆಕ್ಟ್ರಿಕ್ ಎಂಜಿನ್ ನಿಯಂತ್ರಿತ ಹಡಗಾಗಿದ್ದು ಎಷ್ಟೇ ದಪ್ಪವಾದ ಮಂಜುಗಡ್ಡೆಗಳನ್ನು ಒಡೆಯುವಷ್ಟು ಶಕ್ತಿ ಇದಕ್ಕಿದೆ. ಮುಂದಿನ ಕೆಲವು ವರ್ಷಗಳಲ್ಲಿ ಮತ್ತಷ್ಟು ನೀರ್ಗಲ್ಲು ಒಡೆಯುವ ಹಡಗನ್ನು ನಿರ್ಮಿಸುವುದು ರಷ್ಯಾ ಉದ್ದೇಶವಾಗಿದೆ.

ಆರ್ಕಟಿಕ್ ಸಮುದ್ರ ವಲಯದಲ್ಲಿ ಸಾರಿಗೆ ಮತ್ತು ಶಕ್ತಿ ಉತ್ಪಾದನೆ ಮೂಲಸೌಕರ್ಯದ ಜೊತೆಗೆ ಮಿಲಿಟರಿ ಕೇಂದ್ರವನ್ನಾಗಿ ಪರಿವರ್ತಿಸುವುದು ರಷ್ಯಾದ ಉದ್ದೇಶ. ಇದರ ಜೊತೆಗೆ ಈ ಮಾರ್ಗವಾಗಿ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ನೂತನ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಹೊಂದಿದೆ.

ಆದರೆ ಈ ಹಡಗು ಅಮೆರಿಕ ಹಾಗೂ ಚೀನಾ ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆಯಂತೆ. ಆರ್ಕಟಿಕ್ ಸಮುದ್ರ ವಲಯದಲ್ಲೂ ಕಾರ್ಯಾಚರಣೆ ನಡೆಸುವುದು ರಷ್ಯಾ ಗುರಿಯಾಗಿರುವುದು ಇದಕ್ಕೆ ಕಾರಣವಂತೆ. ಅದೇನೇ ಇರಲಿ... 2017ರ ವೇಳೆಯಾಗುವಾಗ ರಷ್ಯಾ ನೌಕಾದಳವನ್ನು ಸೇರ್ಪಡೆಗೊಳ್ಳಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.