ADVERTISEMENT

ಪತ್ತೆಯಾಗಿದೆ ಕಳೆದು ಹೋಗಿದ್ದ ಭೂಖಂಡ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಪತ್ತೆಯಾಗಿದೆ ಕಳೆದು ಹೋಗಿದ್ದ ಭೂಖಂಡ
ಪತ್ತೆಯಾಗಿದೆ ಕಳೆದು ಹೋಗಿದ್ದ ಭೂಖಂಡ   

20 ಕೋಟಿ ವರ್ಷಗಳ ಹಿಂದೆ ನಾಪತ್ತೆ
ಈಗಿನ ಆಫ್ರಿಕಾ, ಉತ್ತರ ಅಮೆರಿಕ, ಏಷ್ಯಾ ಖಂಡಗಳು 20 ಕೋಟಿ ವರ್ಷಗಳ ಹಿಂದೆ ಒಂದಕ್ಕೊಂದು ಬೆಸೆದುಕೊಂಡಿದ್ದವು. ಸುಮಾರು 8.5 ಕೋಟಿ ವರ್ಷಗಳ ಹಿಂದೆ ‘ಗೋಂಡ್ವಾನಾ ಮಹಾಖಂಡ’ ಬೇರ್ಪಡುವಿಕೆ ಸಂದರ್ಭದಲ್ಲಿ ಭಾರತ ಮತ್ತು ಮಡಗಾಸ್ಕರ್ ನಡುವಿನ ಈ ವಿಶಾಲ ಭೂಪ್ರದೇಶ ಬೇರ್ಪಟ್ಟು ನಾಪತ್ತೆಯಾಗಿತ್ತು.

ಹಿಂದೂ ಮಹಾಸಾಗರದಲ್ಲಿ ಮುಳುಗಿದ ಭೂಪ್ರದೇಶ
8.5 ಕೋಟಿ ವರ್ಷಗಳ ಹಿಂದೆ ಮಡಗಾಸ್ಕರ್ ಮತ್ತು ಭಾರತ ಭೂಖಂಡ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾಂಭಿಸಿದವು. ಈ ಎರಡೂ ಭೂ ಪ್ರದೇಶಗಳ ನಡುವೆ ಇದ್ದ ವಿಶಾಲ ಭೂ ಪ್ರದೇಶ ಕಳಚಿಕೊಂಡು, ಕಾಲಾಂತರದಲ್ಲಿ ಹಿಂದೂ ಮಹಾಸಾಗರದಲ್ಲಿ ಮುಳುಗಿತು ಎಂಬುದು ವಿಜ್ಞಾನಿಗಳ ವಾದ.

ಹೆಚ್ಚಿನ ಗುರುತ್ವಾಕರ್ಷಣೆ ನೀಡಿದ ಸುಳಿವು
2013ರಲ್ಲಿ ವಿಜ್ಞಾನಿ ಲೂಯಿಸ್ ಅಶ್ವಾಲ್ ಮತ್ತು ಅವರ ಸಹೋದ್ಯೋಗಿಗಳು ಮಾರಿಷಸ್‌ ಸುತ್ತ  ಇತರ ಭಾಗಗಳಿಗಿಂತ ಹೆಚ್ಚು ಗುರುತ್ವಾಕರ್ಷಣ ಶಕ್ತಿ ಇರುವುದನ್ನು ಗುರುತಿಸಿದರು. ಇದು ಕಳೆದು ಹೋದ ಭೂಪದರವನ್ನು ಹುಡುಕಲು ದೊರೆತ ಮೊದಲ ಸುಳಿವಾಯಿತು. ದ್ವೀಪದ ಮೇಲೆ ಸಿಕ್ಕ ಝಿರ್ಕಾನ್‌ ಹರಳುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವು 300 ಕೋಟಿ ವರ್ಷಗಳಷ್ಟು ಹಳೆಯವು ಎಂದು ತಿಳಿಯಿತು. ಆದರೆ ಈಗಿನ ‘ಮಾರಿಷಸ್’ ಕೇವಲ 80 ಲಕ್ಷ ವರ್ಷಗಳಷ್ಟು ಹಳೆಯದು. ಹೀಗಾಗಿ ಇದರ ಕೆಳಗೆ ಕಳೆದುಹೋದ ಖಂಡ ಇರುವುದು ದೃಢಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT