ADVERTISEMENT

ಫಿಜೆಟ್ ಪೆನ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಫಿಜೆಟ್ ಪೆನ್
ಫಿಜೆಟ್ ಪೆನ್   

ಒತ್ತಡದಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯುವ ಸುಲಭೋಪಾಯವಾಗಿ ಮೊದಲು ಕಂಡುಬಂದಿದ್ದು ಫಿಜೆಟ್ ಸ್ಪಿನ್ನರ್‌. ಸುಮ್ಮನೇ ಅದನ್ನು ಆಡಿಸುತ್ತಾ ನಮ್ಮ ಗಮನವನ್ನು ಅದರೆಡೆಗೆ ಕೇಂದ್ರೀಕರಿಸುವ ಮೂಲಕ ಒತ್ತಡವನ್ನು ಕಳೆಯುವ ಈ ‘ಫಿಜೆಟಿಂಗ್‌’ಗಾಗಿ ಈಗ ಸಾಕಷ್ಟು ಹೊಸ ಹೊಸ ಉತ್ಪನ್ನಗಳು ಹೊರಬರುತ್ತಿವೆ. ಒತ್ತಡ ಅಥವಾ ಬೇಜಾರು ಕಳೆಯಲು ಆಟದ ಸಾಮಗ್ರಿಯಂತೆ ಇವನ್ನು ಕೊಂಡೊಯ್ಯಬಹುದು.

ಆದರೆ ಎಲ್ಲಿಗೇ ಹೋದರೂ ಜೊತೆಗೇ ಇವುಗಳನ್ನು ತೆಗೆದುಕೊಂಡು ಹೋಗುವುದೂ ಬೇಜಾರು. ಅದಕ್ಕೆ, ಸದಾ ನಮ್ಮ ಜೊತೆಗೇ ಇರುವ ವಸ್ತುಗಳನ್ನೇ ಫಿಜೆಟಿಂಗ್‌ಗೂ ಬಳಸಿದರೆ?

ಇದೇ ಹಿನ್ನೆಲೆಯಲ್ಲೇ ಪರಿಚಿತಗೊಂಡಿರುವುದು ಫಿಜೆಟ್ ಪೆನ್‌ಗಳು. ಇನ್ಯೋಪ್ ಬೀಕ್ ಕಂಪನಿ ಇದನ್ನು ಮೊದಲು ವಿನ್ಯಾಸಗೊಳಿಸಿದೆ. ಬರೆಯುವಾಗ ಪೆನ್ ಆಗಿಯೂ, ಬೋರ್‌ ಹೊಡೆದರೆ, ಅದನ್ನು ತಿರುಗಿಸುವ ವಸ್ತುವಾಗಿಯೂ ಬಳಸಿಕೊಳ್ಳಬಹುದು.

ADVERTISEMENT

ಫಿಂಗರ್ ಫಿಜೆಟ್ ತಂತ್ರದ ಮೇಲೆ ಇದು ರೂಪಿತಗೊಂಡಿದೆ. ಪೆನ್‌ನ ತುದಿಯಲ್ಲಿರುವ ಒಂದು ಬಟನ್ ಒತ್ತಿದರೆ ಸಾಕು, ಅದರ ಪಕ್ಕದಲ್ಲೇ ನೀಡಲಾದ ಚಕ್ರ ತಿರುಗಲು ಆರಂಭಿಸುತ್ತದೆ. ಹಾಗೆ ಮಾಡುತ್ತಲೇ ಮನಸ್ಸೂ ರಿಲ್ಯಾಕ್ಸ್ ಆಗುತ್ತದೆ.

ಹಲವು ದೇಶಗಳಲ್ಲಿ ಕೆಲವು ಕಚೇರಿಗಳೇ ತಮ್ಮ ಕೆಲಸಗಾರರಿಗೆ ಈ ಪೆನ್‌ಗಳನ್ನು ನೀಡುತ್ತಿವೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.