ADVERTISEMENT

ಫೇಸ್‌ಬುಕ್‌ ಹೊಸ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಫೇಸ್‌ಬುಕ್‌ ಹೊಸ ಸೌಲಭ್ಯ
ಫೇಸ್‌ಬುಕ್‌ ಹೊಸ ಸೌಲಭ್ಯ   

ಫೋಟೊಗಳು, ವಿಡಿಯೊಗಳು ಮತ್ತು ಸಂದೇಶ ಪ್ರಕಟಿಸಲು ಆಗಾಗ್ಗೆ ಹೊಸ ತಂತ್ರಜ್ಞಾವನ್ನು ಅಳವಡಿಸಿ ಆಕರ್ಷಿಸುವ ಫೇಸ್‌ಬುಕ್‌ ಈಗ ಇತರ ವಿಷಯಗಳ ಕಡೆಗೂ ಗಮನ ಹರಿಸಿದೆ.

ಬಳಕೆದಾರರನ್ನು ಮತ್ತಷ್ಟು ಆಕರ್ಷಿಸಲು ಪೇ–ಫರ್ ನ್ಯೂಸ್‌, ಟಿ.ವಿ ಸಿರೀಸ್‌ನಂತಹ ಹೊಸ ಸೇವೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಹಣ ಪಾವತಿಸಿ ಸುದ್ದಿ ಪಡೆಯುವ ಹೊಸ ಸೌಲಭ್ಯವನ್ನು ಈ ಸಂಸ್ಥೆ ಸದ್ಯದಲ್ಲೇ ಉದ್ಘಾಟಿಸಲಿದೆ. ಇದು ಬಳಕೆಗೆ ಬಂದರೆ ಮಾಧ್ಯಮ ಸಂಸ್ಥೆಗಳು ತಮ್ಮ ಸುದ್ದಿಗಳನ್ನು ನೇರವಾಗಿ ಮುಖಪುಸ್ತಕದ ಗೋಡೆ ಮೇಲೆ ಪ್ರಕಟಿಸಬಹುದು.

ಈಗಲೂ ಪ್ರಕಟಿಸಲು ಸಾಧ್ಯವಿದೆ. ಆದರೆ, ಲಿಂಕ್‌ಗಳನ್ನು ಹಾಕಿ ಪ್ರಕಟಿಸಬೇಕು. ಲಿಂಕ್‌ ಕ್ಲಿಕ್‌ ಮಾಡಿದರೆ ಸಂಸ್ಥೆಯ ಜಾಲತಾಣದ ಪುಟ ತೆರೆದುಕೊಳ್ಳುತ್ತದೆ. ಇದರಿಂದ ಡೇಟಾ ಮತ್ತು ಸಮಯ ಎರಡೂ ವ್ಯಯವಾಗುತ್ತದೆ.

ADVERTISEMENT

ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ರೀತಿಯಲ್ಲಿ ಫೇಸ್‌ಬುಕ್‌ ಸಹ ಟಿ.ವಿ ಸಿರೀಸ್‌ ಆರಂಭಿಸಲು ಮುಂದಾಗಿದೆ. ಪ್ರಮುಖ ಹಾಲಿವುಡ್‌ ಸ್ಟುಡಿಯೊಗಳು, ನಟ–ನಟಿಯರು, ತಂತ್ರಜ್ಞರು, ಏಜೆನ್ಸಿಗಳನ್ನು ಈ ಸಿರೀಸ್‌ ಒಳಗೊಂಡಿರಲಿದೆ. ಜತೆಗೆ ವಿಶೇಷ ಗೇಮ್ಸ್ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿದೆ. ಬ್ರಾಡ್‌ಕಾಸ್ಟರ್‌ ಮತ್ತು ಕ್ರಿಯೇಟರ್‌ಗಳಿಗಾಗಿ ಹೊಸ ತಂತ್ರಾಂಶವೊಂದನ್ನು ಫೇಸ್‌ಬುಕ್‌ ಅಭಿವೃದ್ಧಿಪಡಿಸುತ್ತಿದೆ.

ಆದರೆ ಕೆಲವು ನಿರ್ದಿಷ್ಟ ಬಳಕೆದಾರರಿಗೆ ಮಾತ್ರ ಈ ತಂತ್ರಾಂಶದ ಸೌಲಭ್ಯ ಸಿಗಲಿದೆ. ಇದರೊಂದಿಗೆ ಕ್ರಿಯೇಟಿವ್ ಕಿಟ್ ಕೂಡ ಒದಗಿಸುತ್ತಾರೆ. ಇದರಲ್ಲಿ ವಿಡಿಯೊಗಳನ್ನು ಮಾಡಲು ಇಂಟ್ರೊಗಳು, ಔಟ್ರೊಗಳು, ಸ್ಟಿಕ್ಕರ್ಸ್‌ ಮತ್ತು ಫ್ರೇಮ್ಸ್‌ ಇರುತ್ತವೆ. ಇಷ್ಟು ದಿನ ಸ್ನೇಹಿತರನ್ನು ಮಾತ್ರ ಒಂದುಗೂಡಿಸುತ್ತಿದ್ದ ಫೇಸ್‌ಬುಕ್‌, ಇನ್ನುಮುಂದೆ ವಿವಿಧ ಸಮುದಾಯಗಳನ್ನು ಒಂದುಗೂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.