ADVERTISEMENT

ಬೇಸಿಗೆಗೆ ಚೆಲುವಿನ ತಂಪು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:30 IST
Last Updated 23 ಮಾರ್ಚ್ 2018, 19:30 IST
ಬೇಸಿಗೆಗೆ ಚೆಲುವಿನ ತಂಪು
ಬೇಸಿಗೆಗೆ ಚೆಲುವಿನ ತಂಪು   

ಅಬ್ಬಾ ಬೇಸಿಗೆ ಶುರುವಾಯಿತು ಎನ್ನುತ್ತಲೇ ಸೂರ್ಯನನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ. ಬೇಸಿಗೆಯಲ್ಲಿ ಉಡುಪಿನ ಆದ್ಯತೆಯೂ ಬದಲಾಗುತ್ತದೆ. ಬೇಸಿಗೆಯಲ್ಲಿ ನಡೆಯುವ ಅದ್ದೂರಿ ಸಮಾರಂಭಗಳಲ್ಲಿ ತೊಡುವ ಉಡುಪಿನ ಆಯ್ಕೆಯೇ ದೊಡ್ಡ ತಲೆ ಬಿಸಿ.

ಬಿಸಿಲಿನ ಬೇಗೆಗೆ ಚರ್ಮವನ್ನು ರಕ್ಷಿಸಿಕೊಳ್ಳುವ ಜೊತೆಗೆ ಆರಾಮದಾಯಕ ಎನಿಸುವ ದಿರಿಸು ಹುಡುವುದು ಹರಸಾಹಸವೇ ಸರಿ. ತಿಳಿ ಬಣ್ಣ, ಹಗುರವಾದ ದಿರಿಸು, ಪ್ರಕೃತಿಯಿಂದ ಪ್ರೇರಣೆ ಪಡೆದ ಚಿತ್ತಾರ ಸಾಮಾನ್ಯವಾಗಿ ಬೇಸಿಗೆ ಟ್ರೆಂಡ್ ಆಗಿರುತ್ತದೆ.

ಪುಣೆಯಲ್ಲಿ ನಡೆದ ಫ್ಯಾಷನ್‌ ಶೋದಲ್ಲಿ ಮನೀಶ್ ಮಲ್ಹೋತ್ರ ವಿನ್ಯಾಸದ ಉಡುಗೆಗಳೇ ಪ್ರಮುಖ ಆಕರ್ಷಣೆ ಎನಿಸಿದ್ದವು. ಆಧುನಿಕ ಸ್ಪರ್ಶದಿಂದ ಕಂಗೊಳಿಸಿದ ತಿಳಿಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟ ರೂಪದರ್ಶಿಯರು ಎಲ್ಲರ ಗಮನ ಸೆಳೆದರು.

ADVERTISEMENT

ಕಾಶ್ಮೀರ ಕಣಿವೆಯ ಪ್ರಕೃತಿ ಮತ್ತು ಹೂಗಳಿಂದ ಹೂಗಳಿಂದ ಪ್ರೇರಣೆ ಪಡೆದ ವಿನ್ಯಾಸಗಳೇ ಹೆಚ್ಚಾಗಿದ್ದವು. ನಟಿಯರಾದ ಆದಿತಿ ರಾವ್‌, ರಾಧಿಕಾ ಆಪ್ಟೆ, ನುಸ್ರತ್ ಭರೂಚ ವಾಕ್‌ ಮಾಡಿದರು. ಫ್ಲೋರಲ್‌, ನೆಟೆಡ್‌ ಸೀರೆ, ಕಾಕ್‌ಟೆಲ್‌ ಗೌನ್‌, ಫೆದರ್‌ ಡ್ರೆಸ್‌... ಈ ಶೋ ಹೈಲೆಟ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.