ADVERTISEMENT

ಮತ್ತೆ ಸನ್ನಿ ಜತೆ ಅಭಿನಯಿಸುವಾಸೆ

ಮಂಜುಶ್ರೀ ಎಂ.ಕಡಕೋಳ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಮತ್ತೆ ಸನ್ನಿ ಜತೆ ಅಭಿನಯಿಸುವಾಸೆ
ಮತ್ತೆ ಸನ್ನಿ ಜತೆ ಅಭಿನಯಿಸುವಾಸೆ   

ಇತ್ತೀಚೆಗಷ್ಟೇ ‘ತೇರೆ ಇಂತೆಜಾರ್’ ಸಿನಿಮಾದಲ್ಲಿ ಮಾದಕ ತಾರೆ ಸನ್ನಿ ಲಿಯೋನ್ ಜತೆ ನಾಯಕನಾಗಿ ಅಭಿನಯಿಸಿರುವ ಅರ್ಬಾಜ್ ಖಾನ್, ಅವಕಾಶ ಸಿಕ್ಕರೆ ಮತ್ತೊಮ್ಮೆ ಸನ್ನಿ ಜತೆ ಅಭಿನಯಿಸುವುದಾಗಿ ಹೇಳಿದ್ದಾರೆ.

ಸಹೋದರ ಸಲ್ಮಾನ್ ಖಾನ್ ಜತೆ ‘ದಬಾಂಗ್’ಚಿತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ಅರ್ಬಾಜ್, ಈ ಚಿತ್ರದ ಮೂರನೇ ಸರಣಿ ‘ದಬಾಂಗ್–3’ ಶೀಘ್ರದಲ್ಲೇ ಆರಂಭವಾಗಲಿದೆ ಎಂದೂ ಹೇಳಿದ್ದಾರೆ. ದಬಾಂಗ್ ಚಿತ್ರ ಸರಣಿಯಲ್ಲಿ ಮಾಜಿ ಪತ್ನಿ ಮಲೈಕಾ ಅರೋರಾ, ನಟಿ ಕರೀನಾ ಕಪೂರ್ ತುಂಬಾ ಜನಪ್ರಿಯರಾದರು. ಇದರಿಂದ ಅವರಿಗೆ ಅವಕಾಶಗಳೂ ಹೆಚ್ಚಿದವು. ಅದಕ್ಕಾಗಿ ದಬಾಂಗ್‌ನ ಮೂರನೇ ಸರಣಿಯಲ್ಲಿ ಸನ್ನಿಯನ್ನೇ ಆಯ್ಕೆ ಮಾಡಲಾಗುವುದು ಎಂದು ಅರ್ಬಾಜ್ ನುಡಿದಿದ್ದಾರೆ.

‘ತೇರೆ ಇಂತೆಜಾರ್‌’ನಲ್ಲಿ ಸನ್ನಿ ಜತೆ ಅರ್ಬಾಜ್ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದು, ಈಗಾಗಲೇ ಸಿನಿಮಾದ ಸ್ಟಿಲ್‌ಗಳು ಮತ್ತು ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಮಲೈಕಾ ಜತೆ ವಿಚ್ಛೇದನ ‍ಪಡೆದ ನಂತರ ಅರ್ಬಾಜ್ ಅಭಿನಯದ ಮೊದಲ ಚಿತ್ರ ಇದಾಗಿದ್ದು, ಅರ್ಬಾಜ್ ಮತ್ತೆ ಗೆಲ್ಲುತ್ತಾರೆಯೇ ಎಂದು ಸಿನಿಪ್ರೇಮಿಗಳು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.