ADVERTISEMENT

ಮದ್ಯ ಸೇವಿಸದ ನಟ ರಣವೀರ್‌

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಮದ್ಯ ಸೇವಿಸದ ನಟ ರಣವೀರ್‌
ಮದ್ಯ ಸೇವಿಸದ ನಟ ರಣವೀರ್‌   

ಸದಾ ಸುದ್ದಿಯಲ್ಲಿರುವ ರಣವೀರ್‌ ಸಿಂಗ್‌ ಬಾಲಿವುಡ್‌ನ ಹಾಟ್ ಬಾಯ್‌. ವರ್ಕೌಟ್‌ ವಿಷಯದಲ್ಲಿಯೂ ಇವರು ಕಟ್ಟುನಿಟ್ಟು. ಫಿಟ್‌ನೆಸ್‌ ಫ್ರೀಕ್‌ ಎನ್ನಿಸಿಕೊಂಡಿರುವ ಇವರು, ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ರಣವೀರ್‌,  ಡಯಟ್‌ ಪ್ಲಾನ್‌ ಬಗ್ಗೆ ಇಲ್ಲಿದೆ ಮಾಹಿತಿ.

ಎತ್ತರ: 5.10;

ತೂಕ: 75 ಕೆ.ಜಿ.
ಬೆಳಿಗ್ಗೆ ತಿಂಡಿಗೆ: ಮೊಟ್ಟೆಯ ಬಿಳಿ ಭಾಗ, ಬಾಳೆಹಣ್ಣು
ಉಪಾಹಾರಕ್ಕೆ: ಒಣ ಹಣ್ಣುಗಳು
ರಾತ್ರಿ, ಮಧ್ಯಾಹ್ನ ಊಟಕ್ಕೆ: ಮೀನು, ಕೋಳಿ ಖಾದ್ಯ

ADVERTISEMENT

ವರ್ಕೌಟ್‌ ಬಗ್ಗೆ
* ವ್ಯಾಯಾಮ ತರಬೇತುದಾರ ಲಾಯ್ಡ್‌ ಸ್ಟೀವನ್ಸ್‌.
* ದಿನದಲ್ಲಿ ಎರಡು ಬಾರಿ ಎರಡೂವರೆ ಗಂಟೆ ದೇಹ ಹುರಿಗೊಳಿಸಲು ಮೀಸಲು.
* ಈಜು, ಓಟ ಇವರ ವ್ಯಾಯಾಮದ ಭಾಗ. 

ಆಹಾರ ಕ್ರಮ...
* ಪ್ರತಿ ಮೂರು ಗಂಟೆಗೊಮ್ಮೆ ಲಘು ಆಹಾರ
* ಪ್ರೊಟೀನ್‌ ಹೆಚ್ಚಿರುವ ಕೊಬ್ಬು ಕಡಿಮೆಯಿರುವ ಆಹಾರಕ್ಕೆ ಆದ್ಯತೆ. ಕೋಳಿ, ತರಕಾರಿಗಳನ್ನು ಹೆಚ್ಚು ಸೇವಿಸುತ್ತಾರೆ.
* ಸೇಬು, ಕಿತ್ತಳೆ, ಪಿಯರ್‍ಸ್ ಹಣ್ಣುಗಳೆಂದರೆ ಇಷ್ಟ.

ಬಿಲ್‌ಕುಲ್‌ ತಿನ್ನದ ಆಹಾರ...
* ಆಲ್ಕೊಹಾಲ್‌ ಸೇವನೆ
* ರೋಟಿ, ಬ್ರೆಡ್‌, ಪಾಸ್ತಾ, ನೂಡಲ್ಸ್‌ , ಬಿರಿಯಾನಿ.
* ಎಣ್ಣೆ ಮತ್ತು ಖಾರದ ತಿನಿಸುಗಳು. ಕಲ್ಲಂಗಡಿ ಹಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.