ADVERTISEMENT

‘ಲಿಪ್‌ಸ್ಟಿಕ್ ಅಂಡರ್‌ ಮೈ ಬುರ್ಕಾ’ ಪೋಸ್ಟರ್‌ ಬಂತು

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
‘ಲಿಪ್‌ಸ್ಟಿಕ್ ಅಂಡರ್‌  ಮೈ ಬುರ್ಕಾ’ ಪೋಸ್ಟರ್‌ ಬಂತು
‘ಲಿಪ್‌ಸ್ಟಿಕ್ ಅಂಡರ್‌ ಮೈ ಬುರ್ಕಾ’ ಪೋಸ್ಟರ್‌ ಬಂತು   

ಚಿತ್ರೀಕರಣ ಶುರುವಾದ ದಿನದಿಂದಲೂ ಒಂದಲ್ಲಾ ಒಂದು ವಿವಾದದಿಂದ ಸುದ್ದಿಯಾಗುತ್ತಿರುವ ‘ಲಿಪ್‌ಸ್ಟಿಕ್ ಅಂಡರ್‌ ಮೈ ಬುರ್ಕಾ’ ಸಿನಿಮಾದ ಮತ್ತೊಂದು ವಿವಾದಿತ ಪೋಸ್ಟರ್ ಬಿಡುಗಡೆಯಾಗಿದೆ.

ಬಾಲಾಜಿ ಮೋಷನ್‌ ಪಿಕ್ಚರ್ಸ್‌ ಟ್ವೀಟರ್ ಖಾತೆಯಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ ಈವರೆಗೆ ಚಿತ್ರ ಉಳಿಸಿಕೊಂಡಿರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಶ್ಲೀಲ– ಅಶ್ಲೀಲಗಳ ಚೌಕಟ್ಟಿನಿಂದಾಚೆಗಿನ ನೆಲೆಯಲ್ಲಿ ಸಿನಿಮಾ ವಿರೋಧಿಸುತ್ತಿದ್ದವರಿಗೆ ಉತ್ತರ ಕೊಟ್ಟಿದೆ.

ಮಹಿಳಾ ಲೈಂಗಿಕ ಅಭಿವ್ಯಕ್ತಿಯ ಹೆಸರಿನಲ್ಲಿ ಹಸಿಬಿಸಿ ತೋರಿಕೆ ದೃಶ್ಯಗಳು ಸಿನಿಮಾ ಪ್ರದರ್ಶನಕ್ಕೆ ಮುಳುವಾಗಿತ್ತು. ಟ್ರಿಬ್ಯುನಲ್‌ ಮೂಲಕ ಬಿಡುಗಡೆಗೆ ಹಸಿರು ನಿಶಾನೆ ಪಡೆದುಕೊಂಡಿದ್ದ ಚಿತ್ರತಂಡ  ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು.

ADVERTISEMENT

ಹಳದಿ ನೇಲ್‌ಪಾಲಿಶ್‌ ಹಾಕಿಕೊಂಡಿರುವ ಯುವತಿಯ ಮಧ್ಯದ ಬೆರಳನ್ನೇ ಲಿಪ್‌ಸ್ಟಿಕ್ ಮಾದರಿಯಲ್ಲಿ ತೋರುವ ಮೂಲಕ ಬೋಲ್ಡ್‌ ಸಂದೇಶದ ಪೋಸ್ಟರ್ ಬಿಡುಗಡೆ ಮಾಡಿದೆ. ಇದು ಲೈಂಗಿಕ ಪರಿಭಾಷೆಯ ಸಂಕೇತವೂ ಹೌದು. ಪೋಸ್ಟರ್‌ನ ಅಡಿ ಟಿಪ್ಪಣಿಯಲ್ಲಿರುವ ಅಕ್ಷರಗಳೂ ಇದನ್ನೇ ಹೇಳುತ್ತವೆ.

ಅಲಂಕೃತಾ ಶ್ರೀವಾಸ್ತವ ನಿರ್ದೇಶನದ ಚಿತ್ರದಲ್ಲಿ ಕೊಂಕಣಾ ಸೇನ್ ಶರ್ಮ, ರತ್ನ ಪಾಠಕ್ ಷಾ, ಆಹಾನಾ ಕುಮಾರ್ ಅಭಿನಯಿಸಿದ್ದಾರೆ. ಜುಲೈ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.