ADVERTISEMENT

ವಸ್ತು ಪ್ರದರ್ಶನ ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 19:30 IST
Last Updated 25 ಜುಲೈ 2014, 19:30 IST

ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೇಕಾರರು, ಶಿಲ್ಪಿಗಳು, ಕಲಾವಿದರು ಹಾಗೂ ಕರಕುಶಲಕರ್ಮಿಗಳಿಂದ ತಯಾರಿಸಲಾದ ಹಿತ್ತಾಳೆ ಮತ್ತು ಲೋಹದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇದೇ 27ರಂದು ಕೊನೆಗೊಳ್ಳಲಿದೆ.

ನಗರದ ಎಂ.ಜಿ. ರಸ್ತೆ ಮತ್ತು ಎಚ್‌ಎಸ್‌ಆರ್ ಬಿಡಿಎ ಕಾಂಪ್ಲೆಕ್ಸ್‌ನಲ್ಲಿನ ಮಳಿಗೆಗಳಲ್ಲಿ ಈಗಾಗಲೇ ಆರಂಭವಾಗಿರುವ ಮೇಳದಲ್ಲಿ ಮೊರಾದಾಬಾದ್ ಮತ್ತು ದೆಹಲಿಯ ಹಿತ್ತಾಳೆ ಮತ್ತು ಲೋಹದ ಕರಕುಶಲ ವಸ್ತುಗಳನ್ನು ಕಾಣಬಹುದು. ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐಸಿಐ) ಈ ಮೇಳವನ್ನು ಆಯೋಜಿಸಿದೆ.

ಭಾರತದ ಅನೇಕ ಭಾಗಗಳ ಅತ್ಯುತ್ತಮ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಉತ್ಪನ್ನಗಳಲ್ಲಿ ಸೀರೆ, ಉಡುಪುಗಳು, ವರ್ಣಚಿತ್ರಗಳು, ವಿಶಿಷ್ಟ ಶಿಲ್ಪಗಳು, ಲೋಹದ ಕಲಾಕೃತಿಗಳು, ಮಣ್ಣಿನ ವಸ್ತುಗಳು, ಕಲ್ಲು ಮತ್ತು ಮಾರ್ಬಲ್‌ನಿಂದ ತಯಾರಿಸಿದ ವಸ್ತುಗಳು, ಅಗರಬತ್ತಿ, ಆಭರಣ, ಕಲಾವಂತಿಕೆಯ ಪೀಠೋಪಕರಣಗಳು ಸೇರಿವೆ.

ಹಿತ್ತಾಳೆಯ ಎನಾಮೆಲ್ ವೇಸ್‌ಗಳು, ಬೌಲ್‌ಗಳು, ಲ್ಯಾಂಪ್‌ಗಳು ಮತ್ತು ಪ್ರತಿಮೆಗಳು, ಹಿತ್ತಾಳೆಯ ಧೋಕ್ರಾ ವರ್ಕ್‌ನ ಪ್ಯಾನೆಲ್‌ಗಳು ಮತ್ತು ಇತರೆ ವಸ್ತುಗಳು ಗಮನ ಸೆಳೆಯುತ್ತವೆ. ಬೆಳ್ಳಿಯ ಮತ್ತು ಚಿನ್ನದ ಲೇಪ ಇರುವ ಧಾರ್ಮಿಕ ವಸ್ತುಗಳು ಕೂಡ ಇಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.