ADVERTISEMENT

ಶ್ವಾನಪ್ರೀತಿ ಅಂದರೆ ಇದೇನಾ?

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST
ಶ್ವಾನಪ್ರೀತಿ ಅಂದರೆ ಇದೇನಾ?
ಶ್ವಾನಪ್ರೀತಿ ಅಂದರೆ ಇದೇನಾ?   

ನಾಯಿಯನ್ನು ಮಕ್ಕಳಂತೆ ಕಾಣುವವರೇ ಹೆಚ್ಚು. ಆದರೆ ತಮ್ಮ ಈ ಪ್ರೀತಿಯನ್ನು ಅವುಗಳಿಗೆ ವ್ಯಕ್ತಪಡಿಸುವುದು ಹೇಗೆ? ನಾಯಿಗಳಿಗೂ ಒಂದು ಪಾರ್ಟಿ ಮಾಡಿದರೆ ಹೇಗಿರುತ್ತೆ?

ಇಂಥದ್ದೊಂದು ಆಲೋಚನೆ ಹೊಳೆದದ್ದು ಸ್ಕಾಟ್‌ಲೆಂಡ್‌ನ ‘ಗೋಲ್ಡನ್ ರಿಟ್ರೈವರ್ ಕ್ಲಬ್‌’ಗೆ. ಗೋಲ್ಡನ್ ರಿಟ್ರೈವರ್ ತಳಿ ನಾಯಿಗಳ ಹಿತಾಸಕ್ತಿಗೆಂದೇ ಸ್ಕಾಟ್‌ಲೆಂಡ್‌ನಲ್ಲಿ ಹುಟ್ಟಿಕೊಂಡ ತಂಡ ಇದು.

ಅವುಗಳಿಗೆಂದೇ ಇಲ್ಲಿ ‘ಗಿಸಾಚನ್ ಗ್ಯಾದೆರಿಂಗ್’ ನಡೆಯುತ್ತದೆ. ಭೂಮಿ ಮೇಲಿನ ಅತಿ ಸಂತೋಷ ಕೂಟ ಎಂದೂ ಇದನ್ನು ಪ್ರಾಣಿಪ್ರಿಯರು ಕರೆದಿದ್ದಾರೆ.

ADVERTISEMENT

2006ರಲ್ಲಿ ಕ್ಲಬ್ ತನ್ನ 50ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಮೊದಲ ಬಾರಿಗೆ ಈ ಪಾರ್ಟಿ ಹಮ್ಮಿಕೊಂಡಿತ್ತು. ಮೊದಲ ಬಾರಿ 188 ಶ್ವಾನಗಳು ಇದ್ದವು. ನಂತರ 222ಕ್ಕೆ ಏರಿತು. ವರ್ಷ ವರ್ಷ ಅವುಗಳ ಸಂಖ್ಯೆ ಏರುತ್ತಲೇ ಇದೆ. ಸೌಂದರ್ಯ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳನ್ನೂ ಆ ದಿನ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.