ADVERTISEMENT

ಸ್ವರ್ಗ ಧರೆಗಿಳಿದಾಗ!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST
ಸ್ವರ್ಗ ಧರೆಗಿಳಿದಾಗ!
ಸ್ವರ್ಗ ಧರೆಗಿಳಿದಾಗ!   

ಕಡು ಕಪ್ಪು, ಕೆಂಗುಲಾಬಿಯ ಕೆಂಪು, ನೀಲಾಕಾಶದ ಕಡು ನೀಲಿ, ಕೇದಿಗೆಯ ಹಳದಿ ಹೀಗೆ ಎಲ್ಲ ಬಗೆಯ ಬಣ್ಣಗಳು ಅಲ್ಲಿ ಮೇಳೈಸಿದ್ದವು. ಬಣ್ಣ ಬಣ್ಣದ ಚಿತ್ತಾಕರ್ಷಕ ವಸ್ತ್ರಗಳನ್ನು ಧರಿಸಿ ರ್‌್್ಯಾಂಪ್‌ ಮೇಲೆ ನಡು ಬಳುಕಿಸಿ ನಿಂತ ರೂಪದರ್ಶಿಗಳ ಚೆಲುವೂ ಕಣ್ಣುಕುಕ್ಕುವಂತಿತ್ತು. ಹೀಗಾಗಿ, ಅಲ್ಲಿ ಸ್ವರ್ಗವೇ ಧರೆಗಿಳಿದಂತೆ ಕಾಣಿಸುತ್ತಿತ್ತು. ಅಂದಹಾಗೆ, ಅದು ಎಎಕ್ಸ್‌ಆರ್‌ ಪ್ರಾಪರ್ಟೀಸ್‌ ಆಯೋಜಿಸಿದ್ದ ಫ್ಯಾಷನ್‌ ಷೋ.

ಎಎಕ್ಸ್‌ಆರ್‌ ‘ಸ್ಯೂಸ್‌’ ಹೆಸರಿನಡಿಯಲ್ಲಿ ಪರಿಚಯಿಸಿರುವ ಅತ್ಯಾಧುನಿಕ ಹಾಗೂ ಐಷಾರಾಮಿ ಬುಟಿಕ್‌ ಮನೆಗಳ ಬಿಡುಗಡೆ ಸಮಾರಂಭಕ್ಕೆಂದು ಆಯೋಜಿಸಿದ್ದ ಈ ಫ್ಯಾಷನ್‌ ಷೋ ಸಹ ‘ಸ್ಯೂಸ್‌’ ಮನೆಗಳ ವಿನ್ಯಾಸದಷ್ಟೇ ಮೋಹಕವಾಗಿ ಕಂಡುಬಂದಿತು. ಪುರಾತನ ಗ್ರೀಕ್ ಹಾಗೂ ಆಧುನಿಕತೆಯ ಸಮ್ಮಿಲನದಂತಿದ್ದ ಈ ಷೋಗೆ ಖ್ಯಾತ ವಿನ್ಯಾಸಕಿ ಅನಿತಾ ಪಠಾಣ ಅವರ ಮಾರ್ಗದರ್ಶನವಿತ್ತು.

ರೂಪದರ್ಶಿಗಳು ಪ್ರದರ್ಶಿಸಿದ ಫ್ರಾಂಕ್ ಉಫೆ ಮತ್ತು ವಿಜ್ಡಿಸ್ ವಿನ್ಯಾಸಗಳು ಫ್ಯಾಷನ್‌ ಪ್ರಿಯರನ್ನು ವಿಸ್ಮಯಗೊಳಿಸಿದವು. ಹಾಗೆಯೇ, ನಗರದ ‘ಒನ್‌ ನೈಟ್‌ ಸ್ಟ್ಯಾಂಡ್‌’ ತಂಡ ನೀಡಿದ ಆಕರ್ಷಕ ಸಂಗೀತ ಪ್ರದರ್ಶನ ಷೋಗೆ ಮತ್ತಷ್ಟು ಕಳೆಕಟ್ಟಿತು.

‘ಆಧುನಿಕತೆಗೆ ಪಾರಂಪರಿಕ ಸ್ಪರ್ಶ ನೀಡಿದಾಗ ಅಲ್ಲೊಂದು ಸ್ವರ್ಗ ಸೃಷ್ಟಿಯಾಗುತ್ತದೆ. ಅತ್ಯಾಧುನಿಕ ವಿನ್ಯಾಸದ ಮನೆಗಳನ್ನು ಇಷ್ಟಪಡುವವರಿಗಾಗಿಯೇ ಸ್ಯೂಸ್‌ ಮನೆಗಳನ್ನು ಪರಿಚಯಿಸಲಾಗಿದೆ. ಐಷಾರಾಮಿ ಸೌಕರ್ಯ ಹಾಗೂ ಆಧುನಿಕತೆಯನ್ನು ಬಯಸುವ ಜನರಿಗೆ ಸ್ಯೂಸ್‌ ಅತ್ಯುತ್ತಮ ಆಯ್ಕೆ’ ಎಂದರು ಎಎಕ್ಸ್‌ಆರ್‌ ಪ್ರಾಪರ್ಟೀಸ್‌ನ ನಿರ್ದೇಶಕ ದಿನೇಶ್‌ ಜೈನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT