ADVERTISEMENT

ಹೊಸ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2015, 19:30 IST
Last Updated 8 ಮಾರ್ಚ್ 2015, 19:30 IST

ಮೊಬೈಲ್ ಪೇಮೆಂಟ್ ಕಂಪೆನಿ ಐಕಾಝ್ ಇದೀಗ ಹೊಚ್ಚಹೊಸ ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ (ಮೋವಾ-.ಇನ್) ಪರಿಚಯಿಸಿದೆ.
ಐಕಾಝ್ ಹಾಗೂ ಡಿಸಿಬಿ ಬ್ಯಾಂಕ್ ಜಂಟಿಯಾಗಿ ಮೋವಾ ಅನ್ನು ಬಿಡುಗಡೆಗೊಳಿಸಿದ್ದು, ಈ ಮೊಬೈಲ್ ಆ್ಯಪ್ ನಿಮ್ಮ ಕಾರ್ಡ್‌ಗಳಿಂದ ಬ್ಯಾಂಕ್ ಖಾತೆಗಳಿಗೆ ಹಣ ಠೇವಣಿ ಮಾಡಲು ನೆರವಾಗುತ್ತದೆ.

ಈ ಆ್ಯಪ್‌ನ ಅತ್ಯಂತ ಭಿನ್ನ ಲಕ್ಷಣವೆಂದರೆ, ಇತರೆ ವ್ಯಾಲೆಟ್‌ಗಳಂತೆ ಖಾತೆಯಿಂದ ಪೂರ್ವ ಪಾವತಿ ಇದಕ್ಕೆ ಬೇಕಾಗಿಲ್ಲ, ಗ್ರಾಹಕರ ಹಣವು ವಹಿವಾಟು ನಡೆಸುವ ತನಕವೂ ಅವರದೇ ಖಾತೆಯಲ್ಲಿರುತ್ತದೆ. ಬಳಕೆದಾರರು ಮೊಬೈಲ್ ಸಂಖ್ಯೆ, ಹೆಸರು ಹಾಗೂ ಹುಟ್ಟಿದ ದಿನಾಂಕವನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಈ ಆ್ಯಪ್‌ನ ಸಹಾಯವನ್ನು ಪಡೆದುಕೊಳ್ಳಬಹುದು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಪೇಮೆಂಟ್ ಮೀಡಿಯಂ ಆಗಿ ಜೋಡಿಸಿಕೊಳ್ಳಬೇಕು ಮತ್ತು ಸ್ವೀಕರಿಸುವವರ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡುವ ಮೂಲಕ ಪಾವತಿಯನ್ನು ಆರಂಭಿಸಬಹುದು.

ಡಿಜಿಟಲ್ ಪೇಮೆಂಟ್ ಅನ್ನು ಸ್ವೀಕರಿಸಲು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ ಹೊಂದಿಲ್ಲದ ಲಕ್ಷಾಂತರ ವರ್ತಕರು ಈಗ ಈ ಮೊಬೈಲ್ ಆ್ಯಪ್ ಅನ್ನು ಡಿಜಿಟಲ್ ಪೇಮೆಂಟ್‌ಗಾಗಿ ಉಪಯೋಗಿಸಿಕೊಳ್ಳಬಹುದು. ಗ್ರಾಹಕರು ಇದನ್ನು ವರ್ತಕರು, ಗೆಳೆಯರು, ಕುಟುಂಬದವರಿಗೆ ಪಾವತಿಸುವ ಸಲುವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. ಇದು ಅತ್ಯಂತ ಸುರಕ್ಷಿತ ಆ್ಯಪ್ ಆಗಿದ್ದು, ದೃಢೀಕರಣ, ವಹಿವಾಟು, ಆರ್‌ಬಿಐ ನಿಯಮಾವಳಿಗೆ ಹೀಗೆ ಬಹುಹಂತದ ಭದ್ರತೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.