ADVERTISEMENT

‘ನಾನಿಲ್ಲಿ ಪರಕೀಯನಲ್ಲ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಫವಾದ್‌ ಖಾನ್‌
ಫವಾದ್‌ ಖಾನ್‌   

‘ಭಾರತದಲ್ಲಿ ನನಗೆ ಯಾವಾಗಲೂ ಆತ್ಮೀಯವಾದ ಆತಿಥ್ಯವೇ ದೊರೆತಿದೆ. ನನಗಿದು ಇನ್ನೊಂದು ಮನೆಯಿದ್ದಂತೆ! ಗುಲಾಂ ಅಲಿ ಖಾನ್‌ ಅವರ ಕಾರ್ಯಕ್ರಮಕ್ಕೆ ಯಾಕೆ ವಿರೋಧವೆಂಬುದು ಖಂಡಿತವಾಗಿಯೂ ನನಗೆ ಗೊತ್ತಿಲ್ಲ.

ರಾಜಕೀಯ ವಿಷಯದಲ್ಲಿ ನಾನು ಸಂಪೂರ್ಣ ಅನಕ್ಷರಸ್ಥ. ಆದರೆ ಪಾಕಿಸ್ತಾನದ ಕಲಾವಿದನಾಗಿದ್ದರೂ ನನಗಿಲ್ಲಿ ಪರಕೀಯನೆಂಬ ಭಾವನೆಯಂತೂ ಹುಟ್ಟಿಲ್ಲ’ ಹೀಗೆ ಹೇಳಿದ್ದು ಫವಾದ್‌ ಖಾನ್‌. ಖೂಬ್‌ಸೂರತ್‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿರುವ ಫವಾದ್‌ ಇದೀಗ ಕರಣ್‌ ಜೋಹರ್‌ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಖೂಬ್‌ಸೂರತ್‌ ಚಿತ್ರದಲ್ಲಿ ರತ್ನಾ ಪಾಠಕ್‌ ಶಾ ನನ್ನ ತಾಯಿಯ ಪಾತ್ರ ನಿರ್ವಹಿಸಿದ್ದರು. ಕಪೂರ್‌ ಅಂಡ್‌ ಸನ್ಸ್‌ ಚಿತ್ರದಲ್ಲಿಯೂ ಅವರೇ ಅಮ್ಮನಾಗಿದ್ದಾರೆ. ಬಹುಶಃ ರತ್ನಾ ಶಾಶ್ವತವಾಗಿ ಫಿಲ್ಮಿ ಮಾ ಆಗಲಿದ್ದಾರೆ ಎಂದೂ ಹೇಳಿದ್ದಾರೆ ಫವಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.