ADVERTISEMENT

ವಿಶಿಷ್ಟ ಬೈಕ್‌ಗಳಿಗೆ ದಾರಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
ವಿಶಿಷ್ಟ ಬೈಕ್‌ಗಳಿಗೆ ದಾರಿ
ವಿಶಿಷ್ಟ ಬೈಕ್‌ಗಳಿಗೆ ದಾರಿ   

ಸುಜುಕಿ ಜಿಎಸ್‌ಎಕ್ಸ್– ಎಸ್ 750

ಸುಜುಕಿ ಮೋಟಾರು ಸೈಕಲ್ ಇಂಡಿಯಾದ ಈ ವರ್ಷದ ಅತಿ ನಿರೀಕ್ಷಿತ ಬೈಕ್ ಬಿಡುಗಡೆ ಎಂದರೆ ಸುಜುಕಿ ಜಿಎಸ್‌ಎಕ್ಸ್– ಎಸ್ 750. ಇದೇ ತಿಂಗಳಲ್ಲೇ ಬೈಕ್‌ ಭಾರತೀಯ ರಸ್ತೆಗೆ ಅಡಿಯಿಡಲಿದೆ.

ಸ್ಪರ್ಧಾತ್ಮಕ ಬೈಕ್‌ಗಳ ಪಟ್ಟಿಗೆ ಇದರ ಮೇಲೆ ದೊಡ್ಡ ನಿರೀಕ್ಷೆಯೇ ಇದೆ. ಸ್ಟ್ರೀಟ್ ಫೈಟರ್ ಮಾದರಿಯಂತೆ ಸಾಕಷ್ಟು ಅಂಶಗಳನ್ನು, ವಿನ್ಯಾಸಗಳನ್ನು ಒಳಗೊಂಡಿದೆ. 749 ಸಿಸಿ ಎಂಜಿನ್ ಇದ್ದು, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರಲಿದೆ. ಇದು 10,500 ಆರ್‌ಪಿಎಂನಲ್ಲಿ 110 ಬಿಎಚ್‌ಪಿ ಹಾಗೂ 9500 ಆರ್‌ಪಿಎಂನಲ್ಲಿ 81 ಎನ್‌ಎಂ ಪೀಕ್ ಟಾರ್ಕ್ ಶಕ್ತಿಯನ್ನು ಉತ್ಪಾದಿಸಲಿದೆ.

ADVERTISEMENT

ಸೀಮಿತ ಎಲೆಕ್ಟ್ರಾನಿಕ್ ಹೊಸತನಗಳನ್ನೂ ಒಳಗೊಂಡಿದೆ. ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಇದರೊಂದಿಗೆ ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಂ ಆಯ್ಕೆಯನ್ನು ನೀಡಲಾಗಿದೆ. ಭಾರತದಲ್ಲೇ ಅಸೆಂಬಲ್ ಆಗಲಿದ್ದು, ಬೆಲೆ ₹8 ಲಕ್ಷ ಎಂದು ಅಂದಾಜಿಸಲಾಗಿದೆ.

**

ಟ್ರಂಫ್ ಟೈಗರ್ 1200

ಟ್ರಂಫ್ ದುಬಾರಿ ಹಾಗೂ ಶಕ್ತಿಯುತ ಬೈಕ್‌ಗಳಿಗೆ ಪ್ರಸಿದ್ಧಿ. ಈ ಬೈಕ್ ಕೂಡ ಹಾಗೆಯೇ. ಎಕ್ಸ್ಆರ್‌ಎಕ್ಸ್ ಹಾಗೂ ಎಕ್ಸ್‌ಸಿಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಇದು ಬಿಡುಗಡೆಗೊಳ್ಳುತ್ತಿದೆ.

ಈ ಹೊಸ ಆರ್ಥಿಕ ವರ್ಷದಲ್ಲಿ ಬ್ರಿಟಿಷ್ ಬೈಕ್ ತಯಾರಕರ ಮೊದಲ ಬೈಕ್ ಇದಾಗಿದೆ. ಟ್ರಂಫ್ ಮೋಟಾರು ಸೈಕಲ್ ಇಂಡಿಯಾದ ವಿಮಲ್ ಸಂಬ್ಲಿ, ಈ ಮಾದರಿಯಲ್ಲಿ ಸಾಕಷ್ಟು ಹೊಸತನಗಳನ್ನು ಪರಿಚಯಿಸಿರುವುದಾಗಿ ತಿಳಿಸಿದ್ದಾರೆ.

ಹೆಸರಿನ ರಿವೈಸ್ಡ್ ವಿನ್ಯಾಸ, ಸಿಗ್ನೇಚರ್ ಡಿಆರ್‌ಎಲ್‌ಗಳೊಂದಿಗೆ ಹೊಸ ಎಲ್‌ಇಡಿ ಲೈಟ್‌ಗಳು, ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌ಗಳು, ಹೊಸ ರೈಡಿಂಗ್ ಮೋಡ್‌ಗಳು ವಿನ್ಯಾಸಕ್ಕೆ ಹೊಸತನಗಳು.

ಹಿಲ್ ಹೋಲ್ಡ್ ಕಂಟ್ರೋಲ್ ಅನ್ನು ಮಧ್ಯಮ ಹಾಗೂ ಟಾಪ್ ವೇರಿಯಂಟ್‌ಗಳಲ್ಲಿ ನೀಡಿದೆ. ಕೀಲೆಸ್ ಇಗ್ನಿಷನ್, ಅಪ್‌ಡೇಟ್ ಆದ ಕ್ರ್ಯೂಸ್ ಕಂಟ್ರೋಲ್ ಶಿಫ್ಟ್ ಅಸಿಸ್ಟ್, ಎಬಿಎಸ್‌ಗಳೂ ಇವೆ. ಇದು ಆಫ್‌ ರೋಡ್‌ಗೂ ಹೊಂದಿಕೊಳ್ಳುತ್ತದೆಯಂತೆ. ₹2 ಲಕ್ಷ ಮುಂಗಡ ಹಣವಾಗಿ ಬುಕ್ಕಿಂಗ್ ಕೂಡ ಆರಂಭ ಗೊಂಡಿದೆ. ₹17-18 ಲಕ್ಷ (ಎಕ್ಸ್ ಶೋರೂಂ) ಆಚೀಚೆ ಬೆಲೆ ಇರುವುದಾಗಿ ತಿಳಿದುಬಂದಿದೆ.

**

ಹೀರೊ ಎಕ್ಸ್‌ಟ್ರೀಮ್ 200 ಆರ್

ಪ್ರೀಮಿಯರ್ ಮೋಟಾರು ಸೈಕಲ್ ವಿಭಾಗದಲ್ಲಿ ಹೀರೊ ಮೋಟೊ ಕಾರ್ಪ್ ಹೀರೊ ಎಕ್ಸ್‌ಟ್ರೀಮ್ 200 ಆರ್ ಅನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು. ಅಂತೆಯೇ ಇದೇ ತಿಂಗಳ ಕೊನೆಯಲ್ಲಿ ಬೈಕ್ ಮಾರುಕಟ್ಟೆಗೆ ಬರಲಿದೆ.

2016ರಲ್ಲಿ ಎಕ್ಸ್‌ಟ್ರೀಮ್ 200ಎಸ್‌ ಪರಿಕಲ್ಪನೆಯಲ್ಲಿ ಮೊದಲು ಕಂಡುಬಂದಿತ್ತು. ಈ ಬೈಕ್‌ಗೆ 200 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 8500 ಆರ್‌ಪಿಎಂನಲ್ಲಿ 18.1 ಬಿಎಚ್‌ಪಿ ಹಾಗೂ 6500 ಆರ್‌ಪಿಎಂನಲ್ಲಿ 17.1 ಎನ್‌ ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. 5 ಸ್ಪೀಡ್ ಗಿಯರ್ ಬಾಕ್ಸ್ ಇರಲಿದೆ.

ನಗರದ ರಸ್ತೆಗಳಿಗೆ ಈ ಬೈಕ್ ಹೇಳಿಮಾಡಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ₹80,000-85,000ರ ನಡುವೆ ಇದರ ಬೆಲೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.