ADVERTISEMENT

ಸದ್ದು ಮಾಡುತ್ತಿದೆ ಉದ್ದದ ಶೂ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಸದ್ದು ಮಾಡುತ್ತಿದೆ ಉದ್ದದ ಶೂ
ಸದ್ದು ಮಾಡುತ್ತಿದೆ ಉದ್ದದ ಶೂ   

ಎದುರಿಗೆ ಬಂದವರು ಮಾರುದ್ದ ದೂರ ನಿಲ್ಲಬೇಕು, ಅಂಥ ಬೂಟಿದು. ಇತ್ತೀಚೆಗೆ ಫ್ಯಾಷನ್‌ ಪಡಸಾಲೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಇದರ ಹೆಸರು ಮೆಕ್ಸಿಕನ್‌ ಪಾಯಿಂಟಿ ಶೂ. ಪಾಯಿಂಟ್‌ ಶೂಗಳು ಈಗ ಎಲ್ಲೆಲ್ಲೂ ಇವೆ ಬಿಡಿ. ಆದರೆ ಇದರ ವಿಶೇಷತೆ ಇರುವುದು ಅದು ರೂಪು ಪಡೆದ ಕಥೆಯಲ್ಲಿ. ಮೆಕ್ಸಿಕೊದ ಮ್ಯಾಟೆಹೌಲಾ ಎಂಬ ಹಳ್ಳಿಯಲ್ಲಿನ ಬುಡಕಟ್ಟು ಜನಾಂಗದಲ್ಲಿ ಈ ಶೂ ತುಂಬಾ ಫೇಮಸ್. ಈ ಶೂಗಳಿಗೆ ಸಂಗೀತ, ನೃತ್ಯದ ನಂಟೂ ಇದೆ.

ಈ ಶೂ ತೊಟ್ಟೇ ಜನರು ಅವರ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದುದು. ಅವರ ಸಂಗೀತ ಪ್ರಕಾರ ಗುರಾಚೆರೊಗೆ ಪೂರಕವಾಗಿ ವಿನ್ಯಾಸಗೊಳಿಸಿದ ಶೂಗಳಿವು. ಈ ಶೂನಿಂದ ನೃತ್ಯ ಪ್ರಸಿದ್ಧಿಯಾಯಿತೊ, ನೃತ್ಯದಿಂದ ಶೂ ಪ್ರಸಿದ್ಧಿಯಾಯಿತೊ ಗೊತ್ತಿಲ್ಲ.

ಈ ಜನರಿಗೆ ಪಾಯಿಂಟರ್‌ ಶೂಗಳೆಂದರೆ ತುಂಬಾ ಇಷ್ಟ. ಮೊದಲು ಅವುಗಳಿಗೆ ಮೇಲ್ಭಾಗಕ್ಕೆ ಪಾಯಿಂಟರ್‌ಗಳಿದ್ದರೆ, ಬರಬರುತ್ತಾ ಈ ಪಾಯಿಂಟರನ್ನು ಒಬ್ಬರನ್ನು ಒಬ್ಬರು ನೋಡಿಕೊಂಡು ಸ್ಪರ್ಧೆಗಿಳಿದಂತೆ ಹೆಚ್ಚಾಗುತ್ತಾ ಹೋಗಿ ಇದೀಗ ಸೊಂಟಮಟ್ಟ ಏರಿದೆ.

ADVERTISEMENT

ಅದು ಹೇಗೋ ಈ ಶೂ ಟೆಕ್ಸಾಸ್‌ಗೂ ಪರಿಚಿತಗೊಂಡಿತು. 2014ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಫ್ಯಾಷನ್‌ಶೋನಲ್ಲಿ ಈ ಶೂ ತೊಟ್ಟು ಬಂದ ಒಬ್ಬಾತನನ್ನು ನೋಡಿ ಇಡೀ ಸಭಾಂಗಣವೇ ಬೆರಗಾಗಿ ನೋಡಿತಂತೆ. ಇದರ ನಂತರ ಹೇಳಬೇಕಿಲ್ಲ, ಈಗ ಹಾದಿ ಬೀದಿಯಲ್ಲೆಲ್ಲ ಈ ಶೂಗಳೇ ಯುದ್ಧಕ್ಕೆ ಬಂದವರಂತೆ ಗೋಚರಿಸುತ್ತಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.