ADVERTISEMENT

ಅಭ್ಯಾಸ ಪಂದ್ಯಕ್ಕೆ ದೋನಿ ನಾಯಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST

ಮುಂಬೈ:  ಏಕದಿನ, ಟ್ವೆಂಟಿ–20 ತಂಡಗಳ ನಾಯಕತ್ವಕ್ಕೆ ವಿದಾಯ ಹೇಳಿರುವ ಮಹೇಂದ್ರಸಿಂಗ್ ದೋನಿ ಅವರು ಭಾರತ ಎ ತಂಡದ ನಾಯಕತ್ವ ವಹಿಸಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆಯಲಿರುವ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. 

ಇಂಗ್ಲೆಂಡ್ ಎದುರು ನಡೆಯುವ ಈ ಪಂದ್ಯಗಳಿಗೆ  ಎರಡು ತಂಡಗಳನ್ನು ಆಯ್ಕೆ ಮಾಡಲಾಗಿದೆ. ಜ. 10ರಂದು ಮೊದಲ ಪಂದ್ಯದಲ್ಲಿ ಆಡುವ ತಂಡಕ್ಕೆ ದೋನಿ ಮತ್ತು  ಜ.12ರಂದು ಎರಡನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕರಾಗಿದ್ದಾರೆ.  ಈ ತಂಡದಲ್ಲಿ ಕರ್ನಾಟಕದ ಆರ್. ವಿನಯಕುಮಾರ್ ಸ್ಥಾನ ಪಡೆದಿದ್ದಾರೆ. ಎರಡೂ ಪಂದ್ಯಗಳು ಸಿಸಿಐನಲ್ಲಿ ನಡೆಯಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.