ADVERTISEMENT

ಆರ್‌ಸಿಬಿಗೆ 210 ರನ್‌ಗಳ ಗೆಲುವಿನ ಗುರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 16:13 IST
Last Updated 19 ಏಪ್ರಿಲ್ 2015, 16:13 IST

ಬೆಂಗಳೂರು: ಲಿಂಡ್ಲ್ ಸಿಮನ್ಸ್‌ (59ರನ್ , 9ಬೌ,2 ಸಿ) ಹಾಗೂ ಉನ್ಮುಕ್ತ್ ಚಾಂದ್‌ (58ರನ್, 8ಬೌ,2ಸಿ) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ತಂಡಕ್ಕೆ 210 ರನ್‌ಗಳ ಬೃಹತ್‌ ಗೆಲುವಿನ ಗುರಿ ನೀಡಿದೆ.

ಟಾಸ್‌ ಸೋತು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಇಂಡಿಯನ್ಸ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 209 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾ ಪ್ರೇಮಿಗಳನ್ನು ಸಿಮನ್ಸ್‌, ಉನ್ಮುಕ್ತ್‌ ಅವರು ರನ್‌ ಹೊಳೆ ಮೂಲಕ ರಂಜಿಸಿದರು. ನಾಯಕ ರೋಹಿತ್ ಶರ್ಮಾ ಕೇವಲ 15 ಎಸೆತಗಳಲ್ಲಿ 42 ರನ್‌  (3ಬೌ, 4ಸಿ) ಬಾರಿಸಿ ಮಿಂಚಿದರು.

ಆರ್‌ಸಿಬಿ ಪರ ಡೇವಿಡ್‌ ವೈಸಿ ನಾಲ್ಕು ವಿಕೆಟ್‌ ಪಡೆದರೆ, ಯಜುವೇಂದ್ರ್ ಚಾಹಲ್ 2 ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.