ADVERTISEMENT

ಆಳ್ವಾಸ್‌ ತಂಡ ರನ್ನರ್‌ಅಪ್‌

ಅಖಿಲ ಭಾರತ ಅಂತರ ಕಾಲೇಜು ಬಾಲ್‌ಬ್ಯಾಡ್ಮಿಂಟನ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ತಂಡದವರು ಚೆನ್ನೈಯ ಕಾಂಚಿಪುರಮ್‌ನಲ್ಲಿರುವ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಆಹ್ವಾನ ಅಂತರ ಕಾಲೇಜು ಮಹಿಳಾ ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಸ್ಥಾನ ಪಡೆದುಕೊಂಡರು.

ಮಂಗಳವಾರ ಸಂಜೆ ನಡೆದ ಲೀಗ್‌ನ ನಿರ್ಣಾಯಕ ಪಂದ್ಯದಲ್ಲಿ ಆಳ್ವಾಸ್‌ ತಂಡದವರು 26–29, 24–29ರಿಂದ ಆತಿಥೇಯ ಎಸ್‌ಆರ್‌ಎಂ ತಂಡದ ಎದುರು ಸೋಲನುಭವಿಸಿದರು.

ಇದಕ್ಕೆ ಮೊದಲು ನಡೆದ ಲೀಗ್‌ನ ಇತರ ಪಂದ್ಯಗಳಲ್ಲಿ ಆಳ್ವಾಸ್‌ ವನಿತೆಯರು 29–12, 29–5ರಿಂದ ಚೆನ್ನೈಯ ಕ್ರೆಸೆಂಟ್‌ ಮಹಿಳಾ ಕಾಲೇಜು ವಿರುದ್ಧ ಗೆದ್ದರೆ, 29–12, 29–11ರಿಂದ ಕೊಯಮತ್ತೂರಿನ ನಿರ್ಮಲ ಕಾಲೇಜಿನ ವಿರುದ್ಧ ಜಯ ಗಳಿಸಿದರು.
ಈ ಟೂರ್ನಿಯಲ್ಲಿ ದೇಶದ ಆಯ್ದ 16ತಂಡಗಳು ಪೈಪೋಟಿ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.