ADVERTISEMENT

ಆ್ಯಂಡಿ ಮರ್ರೆ, ಕೆರ್ಬರ್‌ಗೆ ಆಘಾತ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ಫೆಡರರ್‌, ವಾವ್ರಿಂಕ

ಏಜೆನ್ಸೀಸ್
Published 22 ಜನವರಿ 2017, 19:34 IST
Last Updated 22 ಜನವರಿ 2017, 19:34 IST
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಎದುರು ಗೆಲುವು ಪಡೆದಾಗ ಮಿಶಾಚ ಜ್ವೆರೇವ್‌ ಸಂಭ್ರಮ –ಗೆಟ್ಟಿ ಇಮೇಜಸ್‌್
ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಎದುರು ಗೆಲುವು ಪಡೆದಾಗ ಮಿಶಾಚ ಜ್ವೆರೇವ್‌ ಸಂಭ್ರಮ –ಗೆಟ್ಟಿ ಇಮೇಜಸ್‌್   

ಮೆಲ್ಬರ್ನ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಆ್ಯಂಡಿ ಮರ್ರೆ ಮತ್ತು  ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರು ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗ ಪಂದ್ಯದಲ್ಲಿ ಬ್ರಿಟನ್‌ನ 50ನೇ ರ್‍ಯಾಂಕ್‌ನ ಆಟಗಾರ ಮಿಶಾಚ ಜ್ವೆರೇವ್‌ 7–5, 5–7, 6–2, 6–4ರಲ್ಲಿ ತಮ್ಮದೇ ದೇಶದ ಆಟಗಾರ ಮರ್ರೆ ಎದುರು ಜಯಭೇರಿ ಮೊಳಗಿಸಿದರು.

ಕ್ವಾರ್ಟರ್ ಫೈನಲ್‌ಗೆ ಫೆಡರರ್‌: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ನಾಲ್ಕನೇ ಸುತ್ತಿನ ಹೋರಾಟದಲ್ಲಿ ಫೆಡರರ್‌ 6–7, 6–4, 6–1, 4–6, 6–3 ರಲ್ಲಿ ಜಪಾನ್‌ನ ಕಿ ನಿಶಿಕೋರಿ ಅವರನ್ನು ಮಣಿಸಿದರು.

ಮರ್ರೆ ಮತ್ತು ಜೊಕೊವಿಚ್‌ ಅವರು ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಕಾರಣ 35 ವರ್ಷದ ಫೆಡರರ್‌ ಅವರ 18ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯ ಹಾದಿಗೆ ಬಲ ಬಂದಂತಾಗಿದೆ. 

ಕೆರ್ಬರ್‌ಗೆ ಆಘಾತ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕಾದ ಕೊಕೊ ವೆಂಡೆವೆಘೆ 6–2, 6–3ರ ನೇರ ಸೆಟ್‌ ಗಳಿಂದ ಹಾಲಿ ಚಾಂಪಿಯನ್‌ ಏಂಜಲಿಕ್‌ ಕೆರ್ಬರ್‌ ಅವರನ್ನು ಹಣಿದರು.

ಇನ್ನೊಂದು ಪಂದ್ಯದಲ್ಲಿ ಅಮೆರಿಕಾದ ವೀನಸ್‌ ವಿಲಿಯಮ್ಸ್‌ 6–3, 7–5ರಲ್ಲಿ ಬ್ರಿಟನ್‌ನ ಮೋನಾ ಬಾರ್ಥೆಲ್‌ ಎದುರು ಜಯ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.