ADVERTISEMENT

ಇರಾನಿ ಕಪ್‌: ಮುನ್ನಡೆಯ ಹೊಸ್ತಿಲಲ್ಲಿ ಗುಜರಾತ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಭಾರತ ಇತರೆ ತಂಡದ ಅಖಿಲ್‌ ಹೆರ್ವಾಡ್ಕರ್‌ ಬ್ಯಾಟಿಂಗ್‌ ವೈಖರಿ ಪಿಟಿಐ ಚಿತ್ರ
ಭಾರತ ಇತರೆ ತಂಡದ ಅಖಿಲ್‌ ಹೆರ್ವಾಡ್ಕರ್‌ ಬ್ಯಾಟಿಂಗ್‌ ವೈಖರಿ ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಚೊಚ್ಚಲ ಟ್ರೋಫಿ ಜಯಿಸಿ ಸಂಭ್ರಮದಲ್ಲಿರುವ ರಣಜಿ ಚಾಂಪಿಯನ್‌  ಗುಜರಾತ್ ತಂಡ ಇರಾನಿ ಕಪ್‌ನಲ್ಲಿಯೂ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರರನ್ನು ಒಳಗೊಂಡ ಭಾರತ ಇತರೆ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಹೊಸ್ತಿಲಲ್ಲಿದೆ.

ಇಲ್ಲಿನ ಬ್ರಬೋರ್ನ್‌ ಮೈದಾನ ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾರ್ಥಿವ್‌ ಪಟೇಲ್‌ ನಾಯಕತ್ವದ ಗುಜರಾತ್ 358 ರನ್ ಗಳಿಸಿತು. ಭಾರತ ಇತರೆ ತಂಡ 72 ಓವರ್‌ ಗಳಲ್ಲಿ ಒಂಬತ್ತು ವಿಕೆಟ್‌ಗೆ 206 ರನ್ ಗಳಿಸಿದೆ. ಇನಿಂಗ್ಸ್‌ ಮುನ್ನಡೆಗೆ 152 ರನ್ ಅಗತ್ಯವಿರುವ ಕಾರಣ ಗುಜ ರಾತ್‌ ಮುನ್ನಡೆ ಪಡೆದುಕೊಳ್ಳು ವುದು ಬಹುತೇಕ ಖಚಿತ. ಇತರೆ ತಂಡದ ಚೇತೇಶ್ವರ ಪೂಜಾರ (86) ಅವರನ್ನು ಹೊರತು ಪಡಿಸಿದರೆ ಉಳಿದ ಪ್ರಮುಖರು ವೈಫಲ್ಯ ಕಂಡರು.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದ ಕರುಣ್‌ ನಾಯರ್‌   28 ರನ್ ಕಲೆ ಹಾಕಿ ಔಟಾದರು. ಅನುಭವಿಗಳಾದ ಅಭಿನವ್‌ ಮುಕುಂದ್‌, ಮನೋಜ್‌ ತಿವಾರಿ, ವೃದ್ಧಿಮಾನ್‌ ಸಹ ಅವರೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಇತರೆ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ಮುಟ್ಟುವ ಮೊದಲೇ ಪೆವಿಲಿಯನ್‌ ಸೇರಿದರು. ಇವರಲ್ಲಿ ವೃದ್ಧಿಮಾನ್‌ ಮತ್ತು ಶಹ ಬಾಜ್‌ ನದೀಮ್‌ ಮತ್ತು ಸಿದ್ದಾರ್ಥ್‌ ಕೌಲ್‌ ರನ್‌ ಖಾತೆ ಆರಂಭಿಸುವ ಮೊದಲೇ ವಿಕೆಟ್‌ ಒಪ್ಪಿಸಿದ್ದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಗುಜರಾತ್‌ ಮೊದಲ ಇನಿಂಗ್ಸ್‌ 102.5 ಓವರ್‌ಗಳಲ್ಲಿ 358. ಭಾರತ ಇತರೆ ತಂಡ ಪ್ರಥಮ ಇನಿಂಗ್ಸ್‌: 72 ಓವರ್‌ಗಳಲ್ಲಿ 9 ವಿಕೆಟ್‌ಗೆ 206. (ಅಖಿಲ್‌ ಹೆರ್ವಾಡ್ಕರ್‌ 48, ಚೇತೇಶ್ವರ ಪೂಜಾರ 86, ಕರುಣ್‌ ನಾಯರ್‌ 28 ; ಚಿಂತನ್ ಗಜಾ 46ಕ್ಕೆ3, ಟಿ. ಮೋಹಿತ್‌ 48ಕ್ಕೆ2, ಹಾರ್ದಿಕ್‌ ಪಟೇಲ್‌ 73ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.