ADVERTISEMENT

ಎಫ್‌ಸಿ ಗೋವಾ ತಂಡಕ್ಕೆ ಫೆರಾನ್‌

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಪಣಜಿ  : ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌)ನಲ್ಲಿ ಆಡುವ ಎಫ್‌ಸಿ ಗೋವಾ ತಂಡ ಸ್ಪೇನ್‌ನ ಮುಂಚೂಣಿ ಆಟಗಾರ ಫೆರಾನ್‌ ಕೊರೊಮಿನಾಸ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಈ ಸಂಬಂಧ ಎಫ್‌ಸಿ ಗೋವಾ ಫ್ರಾಂಚೈಸ್‌ ಮಂಗಳವಾರ ಫೆರಾನ್‌ ಜೊತೆ ಒಂದು ವರ್ಷದ ಅವಧಿಯ ಒಪ್ಪಂದ ಮಾಡಿಕೊಂಡಿದೆ.

ಫೆರಾನ್‌ ಅವರು ಲಾ ಲಿಗಾ ಚಾಂಪಿಯನ್‌ಷಿಪ್‌ನಲ್ಲಿ 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಎಲ್ಚೆ, ಒಸಾಸುನಾ, ಮಲ್ಲೊರ್ಕಾ ಮತ್ತು ಎಸ್ಪಾನ್ಯೊಲ್‌ ತಂಡಗಳ ಪರ ಆಡಿರುವ 34 ವರ್ಷದ ಫೆರಾನ್‌ ಅವರು ಹಲವು ಟೂರ್ನಿಗಳಲ್ಲಿ ಎಲ್ಚೆ ತಂಡದ ಸಾರಥ್ಯ ವಹಿಸಿದ್ದರು.

ADVERTISEMENT

‘ಫೆರಾನ್‌ ಅನುಭವಿ ಆಟಗಾರ. ಅವರು ನಮ್ಮ ತಂಡದ ಭಾಗವಾಗಿರು ವುದು ಸಂತಸದ ವಿಷಯ. ಅವರ ಸೇರ್ಪಡೆಯಿಂದ  ತಂಡದ ಮುಂಚೂಣಿ ವಿಭಾಗ ಇನ್ನಷ್ಟು ಶಕ್ತಿಶಾಲಿಯಾಗಲಿದೆ’ ಎಂದು ಎಫ್‌ಸಿ ಗೋವಾ
ಫ್ರಾಂಚೈಸ್‌ನ ಅಧ್ಯಕ್ಷ ಅಕ್ಷಯ್‌ ಟಂಡನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.