ADVERTISEMENT

ಐಸಿಸಿ ಮುಖ್ಯಸ್ಥರಾಗಿ ಶಶಾಂಕ್‌ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:02 IST
Last Updated 24 ಮಾರ್ಚ್ 2017, 20:02 IST
ಐಸಿಸಿ ಮುಖ್ಯಸ್ಥರಾಗಿ ಶಶಾಂಕ್‌ ಮುಂದುವರಿಕೆ
ಐಸಿಸಿ ಮುಖ್ಯಸ್ಥರಾಗಿ ಶಶಾಂಕ್‌ ಮುಂದುವರಿಕೆ   

ದುಬೈ (ಪಿಟಿಐ): ಭಾರತದ ಶಶಾಂಕ್‌ ಮನೋಹರ್‌ ಅವರು ಅಂತರ ರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥರಾಗಿ ಇನ್ನೂ ಸ್ವಲ್ಪ ದಿನ ಮುಂದುವರಿಯಲಿದ್ದಾರೆ.

ಮುಖ್ಯಸ್ಥರಾಗಿ ಮುಂದುವರಿಯು ವಂತೆ ಮಂಡಳಿಯ ಸದಸ್ಯರು  ಶಶಾಂಕ್‌ ಅವರನ್ನು ಕೇಳಿಕೊಂಡಿರುವ ಕಾರಣ ಅವರು ಸದ್ಯದ ಮಟ್ಟಿಗೆ ತಮ್ಮ ತೀರ್ಮಾನ ಬದಲಿಸಿದ್ದಾರೆ. ಹೊಸ ಮುಖ್ಯಸ್ಥರ ನೇಮಕವಾಗು ವವರೆಗೆ ಅವರು ಈ ಹುದ್ದೆಯಲ್ಲಿರಲು ನಿರ್ಧರಿಸಿದ್ದಾರೆ.

‘ಐಸಿಸಿಯ ಎಲ್ಲಾ ನಿರ್ದೇಶಕರ ಅಭಿ ಪ್ರಾಯವನ್ನು  ಗೌರವಿಸುತ್ತೇನೆ. ಅವರು ನನ್ನ ಮೇಲೆ  ಇಟ್ಟಿರುವ ನಂಬಿಕೆಗೆ ನಿಜಕ್ಕೂ ಆಭಾರಿಯಾಗಿದ್ದೇನೆ. ಹೀಗಾಗಿ ರಾಜೀನಾಮೆಯ ತೀರ್ಮಾನ ಬದಲಿಸಿ ದ್ದೇನೆ.  ಆರ್ಥಿಕ  ಸುಧಾರಣೆ ಸೇರಿದಂತೆ ಕೆಲ ಮಹತ್ವದ ಕೆಲಸಗಳು ಬಾಕಿ ಇವೆ. ಅವುಗಳನ್ನು ಶೀಘ್ರವೇ ಪೂರೈಸಿ  ಈ ಹುದ್ದೆಯಿಂದ ಕೆಳಗಿಳಿಯುತ್ತೇನೆ’ ಎಂದಿದ್ದಾರೆ.

ADVERTISEMENT

‘ಶಶಾಂಕ್‌ ದಕ್ಷ ಆಡಳಿತಗಾರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು  ಮುಖ್ಯಸ್ಥರಾದ ಬಳಿಕ ಐಸಿಸಿ ಆಡಳಿತದಲ್ಲಿ ಹಲವು ಬದಲಾವಣೆ ಗಳನ್ನು ತಂದಿದ್ದಾರೆ. ಕ್ರಿಕೆಟ್‌ ಬೆಳವಣಿಗೆಗೆ ಅನುಕೂಲಕರವಾದ ಹೊಸ ಯೋಜನೆ ಗಳನ್ನು ರೂಪಿಸಿದ್ದಾರೆ. ಅವರು ರಾಜೀನಾಮೆ ನಿರ್ಧಾರ ಬದಲಿಸಿ ಮತ್ತೆ ಮುಖ್ಯಸ್ಥರಾಗಿ ಮುಂದುವರಿಯಲು ಮನಸ್ಸು ಮಾಡಿರುವುದು ಖುಷಿಯ ವಿಷಯ. ಅವರ ತೀರ್ಮಾನವನ್ನು ನಾವು ಗೌರವಿಸುತ್ತೇವೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯಸ್ಥ ಡೇವಿಡ್‌ ಪೀವೆರ್‌ ತಿಳಿಸಿದ್ದಾರೆ.

ಶಶಾಂಕ್‌ ಅವರು ವೈಯಕ್ತಿಕ ಕಾರಣ ನೀಡಿ ಇತ್ತೀಚೆಗೆ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.