ADVERTISEMENT

ಐ ಲೀಗ್: ಬೆಂಗಳೂರು ಎಫ್‌ಸಿ–ಬೆಂಗಾಲ್‌ ಇಂದು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಬರಾಸತ್‌, ಪಶ್ಚಿಮ ಬಂಗಾಳ (ಪಿಟಿಐ):  ಸತತ ಮೂರು ಪಂದ್ಯಗಳಲ್ಲಿ ಗೆದ್ದು ಅತ್ಯಂತ ಆತ್ಮವಿಶ್ವಾಸದಲ್ಲಿರುವ ಬೆಂಗ ಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಭಾನುವಾರ ಇಲ್ಲಿ ಈಸ್ಟ್‌ ಬೆಂಗಾಲ್‌ ಎದುರು ಪೈಪೋಟಿ ನಡೆಸಲಿದ್ದು ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿದೆ.

ಹಾಲಿ ಚಾಂಪಿಯನ್‌ ಕೂಡ ಆಗಿ ರುವ ಬಿಎಫ್‌ಸಿ ತವರಿನಲ್ಲಿ ಆಡಿದ ಪಂದ್ಯ ಗಳಲ್ಲಿ  ಶಿಲ್ಲಾಂಗ್‌ ಲಜಾಂಗ್ ಮತ್ತು  ಚೆನ್ನೈ ಸಿಟಿ ಕ್ಲಬ್‌ ಎದುರು ಗೆಲುವು ಪಡೆ ದಿತ್ತು. ಮೂರನೇ ಪಂದ್ಯದಲ್ಲಿ ಮುಂಬೈ ತಂಡವನ್ನು 3–0 ಗೋಲುಗಳಿಂದ ಸೋಲಿಸಿತ್ತು. ಈ ತಂಡದ ಪ್ರಮುಖ ಆಟಗಾರ ಸಿ.ಕೆ. ವಿನೀತ್ ಅವರೇ ಎಲ್ಲಾ ಗೋಲುಗಳನ್ನು ಕಲೆ ಹಾಕಿದ್ದರು.

ಅಷ್ಟೇ ಅಲ್ಲ ಎದುರಾಳಿ ತಂಡಗಳಿಗೆ ಒಂದೂ ಗೋಲು ಗಳಿಸಲು ಅವಕಾಶಕೊಟ್ಟಿಲ್ಲ. ಇದು ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ತಂಡದ ರಕ್ಷಣಾ ವಿಭಾಗ ಹೊಂದಿರುವ ಶಕ್ತಿಗೆ ಸಾಕ್ಷಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.