ADVERTISEMENT

ಒಲಿಂಪಿಕ್ಸ್‌ ಈಜು ಸ್ಫರ್ಧೆಯ ಪದಕ ವಿಜೇತ ಕೈಲ್ ಚಾಲ್ಮರ್ಸ್‌ಗೆ ಹೃದಯ ಶಸ್ತ್ರಚಿಕಿತ್ಸೆ

ಪಿಟಿಐ
Published 24 ಮೇ 2017, 11:03 IST
Last Updated 24 ಮೇ 2017, 11:03 IST
ಕೈಲ್ ಚಾಲ್ಮರ್ಸ್‌
ಕೈಲ್ ಚಾಲ್ಮರ್ಸ್‌   

ಸಿಡ್ನಿ: ರಿಯೊ ಒಲಿಂಪಿಕ್ಸ್‌ನ 100 ಮೀ. ಈಜು ಸ್ಫರ್ಧೆಯಲ್ಲಿ ಚಿನ್ನದ ಪದಕ ವಿಜೇತ ಆಸ್ಟ್ರೇಲಿಯಾದ ಕೈಲ್ ಚಾಲ್ಮರ್ಸ್‌  ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಜುಲೈನಲ್ಲಿ ಆರಂಭವಾಗಲಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಚಾಲ್ಮರ್ಸ್‌ ಅವರಿಗೆ ಅಸಹಜ ರೀತಿಯ ತೀವ್ರ ಹೃದಯ ಬಡಿತ (Supraventricular tachycardia) ತೊಂದರೆಯ ಕಾರಣ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಈ ಸಮಸ್ಯೆಯಿಂದ ಜೀವಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ಸಹಜ ಜೀವಶೈಲಿ ಇರಲಾರದು.

ಈ ಕುರಿತು ಪ್ರತಿಕ್ರಿಯಿಸಿರುವ 18 ವರ್ಷದ ಕೈಲ್ ಚಾಲ್ಮರ್ಸ್ ‘ನಾನು ಈ ಹಿಂದಿಯೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದೆ. ಆದರೆ  ದುರದೃಷ್ಟವಶಾತ್ ಸಮಸ್ಯೆ ಬಗೆಹರಿದಿರಲಿಲ್ಲ. ವಿಶ್ವ ಚಾಂಪಿಯನ್‌ಷಿಪ್‌ನಿಂದ ದೂರ ಉಳಿಯುವುದು ಕಠಿಣ ನಿರ್ಧಾರ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.