ADVERTISEMENT

ಕಾಶ್ಮೀರದಲ್ಲಿ ಸೈಕ್ಲಿಂಗ್‌ ಸ್ಪರ್ಧೆ 31ರಂದು

​ಪ್ರಜಾವಾಣಿ ವಾರ್ತೆ
Published 28 ಮೇ 2015, 19:30 IST
Last Updated 28 ಮೇ 2015, 19:30 IST

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ಮೇ 31 ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯನ್ನು ಏರ್ಪಡಿಸಲಿದೆ. ಈ ಸ್ಪರ್ಧೆಯಲ್ಲಿ 1500 ಸೈಕ್ಲಿಸ್ಟ್‌ಗಳು ಭಾಗವಹಿಸುವರು.

‘ಕಣಿವೆ ರಾಜ್ಯದಲ್ಲಿ ಸೈಕ್ಲಿಂಗ್‌ ಕ್ರೀಡೆಯನ್ನು ಉತ್ತೇಜಿಸಲು ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತನಾಮ ಸೈಕ್ಲಿಸ್ಟ್‌ಗಳು ಭಾಗವಹಿಸುವರು’ ಎಂದು ಐಜಿಪಿ ಎಸ್‌.ಎ. ವಟಾಲಿ ತಿಳಿಸಿದ್ದಾರೆ.

‘ವಿವಿಧ ವಯೋಮಿತಿಯ  ವಿಭಾಗಗಳು ಮತ್ತು ಮಹಿಳಾ ಹಾಗೂ ಪುರುಷರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನಗದು ಪುರಸ್ಕಾರಗಳನ್ನು ನೀಡಲಾಗುವುದು’ ಎಂದು ಸಂಘಟನಾ ಕಾರ್ಯದರ್ಶಿಯೂ ಆಗಿರುವ ವಟಾಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.