ADVERTISEMENT

ಕೆಎಸ್‌ಸಿಎ ಬಿಟಿಆರ್‌ ಶೀಲ್ಡ್‌ ಕ್ರಿಕೆಟ್‌: ದೆಹಲಿ ಪಬ್ಲಿಕ್‌ ಶಾಲೆಗೆ ಜಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ಬೆಂಗಳೂರು: ಎನ್‌.ಜಿ. ಕುಶಾಲ್‌ (126) ಅವರ ಮನಮೋಹಕ ಶತಕದ ಬಲದಿಂದ ದೆಹಲಿ ಪಬ್ಲಿಕ್‌ ಶಾಲೆ, ದಕ್ಷಿಣ ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ ಬಿಟಿಆರ್‌ ಶೀಲ್ಡ್‌ಗಾಗಿ  ನಡೆಯುತ್ತಿರುವ 14 ವರ್ಷದೊಳಗಿನವರ ಡಿವಿಷನ್‌ 1ರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜೈನ್‌ ರೆಸಿಡೆನ್ಸಿ ಇಂಟರ್‌ನ್ಯಾಷನಲ್‌  ಶಾಲೆ ವಿರುದ್ಧ 267ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ದೆಹಲಿ ಪಬ್ಲಿಕ್‌ ಶಾಲೆ, ದಕ್ಷಿಣ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 394 ( ಎನ್‌.ಜಿ. ಕುಶಾಲ್‌ 126, ಎಸ್‌.ಸಿದ್ಧಾಂತ್‌ ಔಟಾಗದೆ 93; ಸುಯಾಸ್‌ ಶೆಕ್ಸಾರಿಯಾ 47ಕ್ಕೆ4). ಜೈನ್‌ ಇಂಟರ್‌ನ್ಯಾಷನಲ್‌ ಶಾಲೆ: 26.4 ಓವರ್‌ಗಳಲ್ಲಿ 128 . ಫಲಿತಾಂಶ: ದೆಹಲಿ ಪಬ್ಲಿಕ್‌ ಶಾಲೆಗೆ 267ರನ್‌ ಗೆಲುವು.

ಬಿಷಪ್‌ ಕಾಟನ್‌ ಬಾಲಕರ ಶಾಲೆ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 395 (ಜೇ  ಬೋರಾಹ್‌ 104). ಆರ್ಮಿ ಪಬ್ಲಿಕ್‌ ಶಾಲೆ. ಪ್ಯಾರಚೂಟ್‌ ರೆಜಿಮೆಂಟ್‌: 48.3 ಓವರ್‌ ಗಳಲ್ಲಿ 253 (ವಿಶಾಲ್‌ ವಿಲಾಸ್‌ 73; ಹಾರ್ದಿಕ್‌ ರಾಜ್‌ 47ಕ್ಕೆ4, ಓಮರ್‌ ಅಬುಬಕರ್‌ 13ಕ್ಕೆ4). ಫಲಿತಾಂಶ: ಬಿಷಪ್‌ ಕಾಟನ್‌ ಶಾಲೆಗೆ 142ರನ್‌ ಜಯ. ಸೇಂಟ್‌ ಜೋಸೆಫ್‌ ಬಾಲಕರ ಪ್ರೌಢ ಶಾಲೆ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 262 (ಎನ್‌.ಎ. ಚಿನ್ಮಯ್‌ 125; ಆರ್ಯನ್‌ ಶಿಲೋಟ್ರಿ 51ಕ್ಕೆ3). ದೆಹಲಿ ಪಬ್ಲಿಕ್‌ ಶಾಲೆ,

ADVERTISEMENT

ನಾರ್ತ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 139 (ಶ್ರೇಯಸ್‌ ಸೇನಗುಪ್ತ 24; ಅರ್ಜುನ್‌ ನಾಯರ್‌ 18ಕ್ಕೆ3, ಅರ್ಸಲಾನ್‌ 8ಕ್ಕೆ2). ಫಲಿತಾಂಶ:ಸೇಂಟ್‌ ಜೋಸೆಫ್‌ ಶಾಲೆಗೆ 123ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.