ADVERTISEMENT

ಕೇಂದ್ರ, ಉತ್ತರ ವಲಯ ಉತ್ತಮ ಆರಂಭ

ಕ್ರಿಕೆಟ್‌: ಪ್ರಭು ಸಿಮ್ರಾನ್‌, ಆಯುಷ್‌ ಶತಕದ ಜೊತೆಯಾಟ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಕೇಂದ್ರ ವಲಯದ ಪರ ಶತಕ ಸಿಡಿಸಿದ ಆರ್ಯನ್ ಶರ್ಮಾ ಅವರ ಸಂಭ್ರಮ ಪ್ರಜಾವಾಣಿ ಚಿತ್ರ/ ಎಂ.ಆರ್.ಮಂಜುನಾಥ
ಕೇಂದ್ರ ವಲಯದ ಪರ ಶತಕ ಸಿಡಿಸಿದ ಆರ್ಯನ್ ಶರ್ಮಾ ಅವರ ಸಂಭ್ರಮ ಪ್ರಜಾವಾಣಿ ಚಿತ್ರ/ ಎಂ.ಆರ್.ಮಂಜುನಾಥ   

ಹುಬ್ಬಳ್ಳಿ: ಕೇಂದ್ರ ಮತ್ತು ಉತ್ತರ ವಲಯ ತಂಡದವರು ಅಖಿಲ ಭಾರತ ಅಂತರ ವಲಯ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಮೊದಲ ದಿನ ಮೇಲುಗೈ ಸಾಧಿಸಿದ್ದಾರೆ.

ಬೆಳಗಾವಿಯ ಕೆ.ಎಸ್‌.ಸಿ.ಎ ಮೈದಾನದಲ್ಲಿ ಆರ್ಯನ್‌ ಶರ್ಮಾ ಅವರ ಅಮೋಘ ಶತಕ (109; 263 ಎಸೆತ, 15 ಬೌಂಡರಿ), ಪ್ರಭಾನೂರ ಸಿಂಗ್‌ (66; 105 ಎಸೆತ, 12 ಬೌಂ) ಹಾಗೂ ಚಂಚಲ್‌ ರಾಥೋಡ್‌ (59; 83 ಎಸೆತ, 6 ಬೌಂ) ಅವರ ಉತ್ತಮ ಆಟ ದಕ್ಷಿಣ ವಲಯದ ವಿರುದ್ಧ ಕೇಂದ್ರ ವಲಯದ ಕೈ ಹಿಡಿಯಿತು.

ಹುಬ್ಬಳ್ಳಿಯ ರಾಜನಗರ ಕೆ.ಎಸ್‌.ಸಿ.ಎ ಮೈದಾನದಲ್ಲಿ ಶತಕದ ಜೊತೆಯಾಟವಾಡಿದ  ಪ್ರಭು ಸಿಮ್ರಾನ್ ಸಿಂಗ್‌ (55; 75 ಎಸೆತ, 1 ಸಿಕ್ಸರ್‌, 8 ಬೌಂ) ಮತ್ತು ಆಯುಷ್ ಬದೋನಿ (58; 72 ಎಸೆತ, 1 ಸಿ, 11 ಬೌಂ) ಪಶ್ಚಿಮ ವಲಯ ವಿರುದ್ಧದ ಪಂದ್ಯದಲ್ಲಿ ಉತ್ತರ ವಲಯ ಆಧಿಪತ್ಯ ಸ್ಥಾಪಿಸಲು ನೆರವಾದರು.

ಎರಡು ದಿನಗಳ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕೇಂದ್ರ ವಲಯ ತಂಡ 90 ಓವರ್‌ಗಳಲ್ಲಿ 310 ರನ್‌ಗಳಿಗೆ ಆಲೌಟಾಯಿತು. ದಿನದಾಟದ ಮುಕ್ತಾಯದ ವೇಳೆ ದಕ್ಷಿಣ ವಲಯದ ಒಂದು ವಿಕೆಟ್ ಉರುಳಿದ್ದು ಇನ್ನೂ 291 ರನ್‌ಗಳ ಹಿನ್ನಡೆ ಅನುಭವಿಸಿದೆ.

ಹುಬ್ಬಳ್ಳಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಶ್ಚಿಮ ವಲಯ 75 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟಾಯಿತು. ಆಕಾಶ ಪಾಂಡೆ ಮತ್ತು ಅರ್ಜುನ್‌ ತೆಂಡೂಲ್ಕರ್ ಅವರ ಪರಿಣಾಮಕಾರಿ ಬೌಲಿಂಗ್ ನಡುವೆಯೂ ಮಧ್ಯಮ ಕ್ರಮಾಂಕದ ಹೊಸಳೆ (57; 132 ಎಸೆತ, 11 ಬೌಂ) ಮತ್ತು ಸಂಪ್ರೀತ್ ಬಗ್ಗ (60; 163 ಎಸೆತ, 7 ಬೌಂ) ತಾಳ್ಮೆಯ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾದರು.

ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರ ವಲಯ ಮೂರು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಪ್ರಭು ಸಿಮ್ರಾನ್‌ ಮತ್ತು ಆಯುಷ್‌ ಬದೋನಿ ಅಮೋಘ ಆಟ ಪ್ರದರ್ಶಿಸಿ ದಿನದಾಟದ ಅಂತ್ಯದ ವರೆಗೆ ತಂಡವನ್ನು ಕಾಪಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 67 ರನ್‌

ಪಶ್ಚಿಮ ವಲಯ, ಮೊದಲ ಇನಿಂಗ್ಸ್‌: 75 ಓವರ್‌ಗಳಲ್ಲಿ 194ಕ್ಕೆ ಆಲೌಟ್‌ (ಓಂ ಭೋಸಲೆ 57, ಸಂಪ್ರೀತ್‌ ಬಗ್ಗಾ 60, ಅಥರ್ವ ಅಂಕೊಲೇಕರ್‌ 29; ಶರ್ಮಾ 42ಕ್ಕೆ2, ನೀರಜ್‌ ರಾಟಿ 32ಕ್ಕೆ2); ಉತ್ತರ ವಲಯ, ಮೊದಲ ಇನಿಂಗ್ಸ್‌: 27 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 127 (ಪ್ರಭು ಸಿಮ್ರಾನ್‌ ಸಿಂಗ್‌ 55, ಆಯುಷ್‌ ಬದೋನಿ 58).

ಕೇಂದ್ರ ವಲಯ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 310ಕ್ಕೆ ಆಲೌಟ್‌ (ಆರ್ಯನ್ ಶರ್ಮಾ 109, ಪ್ರಭನೂರ್ ಸಿಂಗ್‌ 66, ಚಂಚಲ್‌ ರಾಥೋಡ್‌ 59, ಹರ್ಷಿತ್ ಪಲಿವಾಲ್‌ 30; ಅಜಯ್‌ ದೇವೆಗೌಡ 68ಕ್ಕೆ2, ಕಿಶನ್ ಕುಮಾರ್‌ 36ಕ್ಕೆ2); ದಕ್ಷಿಣ ವಲಯ, ಮೊದಲ ಇನಿಂಗ್ಸ್‌: 8 ಓವರ್‌ಗಳಲ್ಲಿ 1 ವಿಕೆಟ್‌ಗೆ 19.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.