ADVERTISEMENT

ಕೊಹ್ಲಿ ಉತ್ತಮ ನಾಯಕ: ಗಿಲ್‌ಕ್ರಿಸ್ಟ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST

ಮೆಲ್ಬರ್ನ್ (ಪಿಟಿಐ):   ವಿರಾಟ್ ಕೊಹ್ಲಿ ಉತ್ತಮ ನಾಯಕ. ತಮ್ಮ ತಂಡ ಮತ್ತು ದೇಶವನ್ನು  ತಮ್ಮೆಡೆಗೆ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

‘ಡಿಆರ್‌ಎಸ್ ವಿವಾದವು ದೊಡ್ಡ ತಿರುವು ಪಡೆಯಲಿಲ್ಲ. ಅದು ಸುಖಾಂತ್ಯ ಕಂಡಿದ್ದು ಸಂತಸದ ವಿಷಯ.  ಅದರಲ್ಲಿ ಕೊಹ್ಲಿ ಅವರು ತಮ್ಮ ಹಟ ಸಡಿಲಿಸಿ ಕ್ರಿಕೆಟ್‌ನ ಒಳಿತಿನ ಪರವಾಗಿದ್ದು ಶ್ಲಾಘನೀಯ. ಅದರೊಂದಿಗೆ ಅವರು 2008ರಲ್ಲಿ ನಡೆದಿದ್ದ ಮಂಕಿಗೇಟ್ ಪ್ರಕರಣದಂತೆ ಈ ವಿವಾದವು ತಿರುವು ಪಡೆಯುವ ಅಪಾಯವನ್ನು ತಪ್ಪಿಸಿದರು’ ಎಂದು ಹೇಳಿದರು.

‘ವಿರಾಟ್ ನಾಯಕತ್ವದಷ್ಟೇ ಬ್ಯಾಟಿಂಗ್‌ನಲ್ಲಿ ಉತ್ತಮ ಕೌಶಲ್ಯ ಹೊಂದಿದ್ದಾರೆ. ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ವಿಶ್ವದ ಎಲ್ಲ ಕ್ರೀಡಾಂಗಣಗಳಲ್ಲಿ ಮಿಂಚುವ ಸಮರ್ಥರಾಗಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.