ADVERTISEMENT

ಕ್ರಿಕೆಟ್‌: ಭಾರತದ ಮುಡಿಗೆ ಸರಣಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2017, 19:30 IST
Last Updated 1 ಫೆಬ್ರುವರಿ 2017, 19:30 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಪಂದ್ಯವನ್ನು 75 ರನ್‌ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2–1ರಿಂದ ತನ್ನದಾಗಿಸಿಕೊಂಡ ಭಾರತ ತಂಡದ ಆಟಗಾರರು ಟ್ರೋಫಿಯನ್ನು ಸಂತಸದಿಂದ ಎತ್ತಿಹಿಡಿದಿರುವುದು ಪ್ರಜಾವಾಣಿ ಚಿತ್ರ: ಪಿ.ರಂಜು

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡದವರು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯನ್ನು 2–1ರಲ್ಲಿ ಗೆದ್ದುಕೊಂಡರು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ 6 ವಿಕೆಟ್‌ಗಳನ್ನು ಉರುಳಿಸಿ ಅದ್ಭುತ ಕೈಚಳಕ ತೋರಿದರು. ಚಾಹಲ್‌ ಸಾಧನೆಯ ನೆರವಿನಿಂದ ಭಾರತದ ಆಟಗಾರರು 75 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿದರು.

ಇದರಿಂದ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಮೂರೂ ಮಾದರಿಗಳಲ್ಲಿ ನಾಯಕರಾಗಿ ಸರಣಿ ಗೆದ್ದ ಸಾಧನೆ ಮಾಡಿದಂತಾಯಿತು. ವಿಶೇಷವೆಂದರೆ ಕೊಹ್ಲಿ ನಾಯಕರಾದ ಬಳಿಕ ಭಾರತ ಆಡಿದ ಮೊದಲ ಏಕದಿನ ಮತ್ತು ಚುಟುಕು ಮಾದರಿಯ ಸರಣಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.