ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಬೋಪಣ್ಣ–ದೊಡಿಗ್‌

ಜುಕಜ್‌ ಕುಬತ್–ಮರ್ಸೆಲೊ ಮೆಲೊ ವಿರುದ್ಧ ಮುಂದಿನ ಪಂದ್ಯ

ಪಿಟಿಐ
Published 18 ಆಗಸ್ಟ್ 2017, 19:46 IST
Last Updated 18 ಆಗಸ್ಟ್ 2017, 19:46 IST
ಇವಾನ್ ದೊಡಿಗ್ ಮತ್ತು ರೋಹನ್ ಬೋಪಣ್ಣ (ಬಲ)
ಇವಾನ್ ದೊಡಿಗ್ ಮತ್ತು ರೋಹನ್ ಬೋಪಣ್ಣ (ಬಲ)   

ನವದೆಹಲಿ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಕ್ರುವೇಷ್ಯಾದ ಇವಾನ್ ದೊಡಿಗ್‌ ಜೋಡಿ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.

ಏಳನೇ ಶ್ರೇಯಾಂಕದ ಬೋಪಣ್ಣ ಜೋಡಿ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 5–7, 7–5, 10–8ರಲ್ಲಿ ಕೊಲಂಬಿಯಾದ ಜುವಾನ್ ಸೆಬಾಸ್ಟಿಯನ್ ಮತ್ತು ಇಟಲಿಯ ಫ್ಯಾಬಿಯೊ ಫೋಗನಿನಿ ಅವರನ್ನು ಮಣಿಸಿತು.

41ನಿಮಿಷದ ಪಂದ್ಯದಲ್ಲಿ ಬೋಪಣ್ಣ ಜೋಡಿ ಒಂದು ಬಾರಿ ಎದುರಾಳಿಯ ಸರ್ವ್‌ ಮುರಿಯಿತು. ಒಮ್ಮೆ ಸರ್ವ್‌ ಬಿಟ್ಟುಕೊಟ್ಟಿತು.

ADVERTISEMENT

ಮುಂದಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಜುಕಜ್‌ ಕುಬತ್ ಮತ್ತು ಮರ್ಸೆಲೊ ಮೆಲೊ ವಿರುದ್ಧ ಆಡಲಿದೆ.

ಈ ಆಟಗಾರರು ಪ್ರೀ ಕ್ವಾರ್ಟ ರ್‌ನಲ್ಲಿ 7–5, 6–2ರಲ್ಲಿ ಡಿಯಾಗೊ ಸಚ್‌ವರ್ತ್‌ ಮತ್ತು ಮಿಶಚಾ ಜ್ವೆರೆವ್‌ ವಿರುದ್ಧ ಗೆದ್ದಿದ್ದಾರೆ.

ಡಬ್ಲ್ಯುಟಿಎ ವಿಭಾಗದಲ್ಲಿ ಸಾನಿಯಾ ಮಿರ್ಜಾ ಮತ್ತು ಶಾಯಿ ಪೆಂಗ್ ಜೋಡಿ ಸೆಮಿಫೈನಲ್ ತಲುಪಿದೆ.

ಈ ಜೋಡಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6–3, 6–7, 10–3ರಲ್ಲಿ ಇರಿನಾ ಕ್ಯಾಮಿಲ್ಲಾ ಬೇಗ್ ಮತ್ತು ರಲುಕಾ ಒಲ್ರು ವಿರುದ್ಧ ಜಯಿಸಿತು.

ರಾಮ್‌ಕುಮಾರ್ ರಾಮ ನಾಥನ್‌ ಸಿಂಗಲ್ಸ್‌ನಲ್ಲಿ ಹಾಗೂ ಲಿಯಾಂಡರ್ ಪೇಸ್ ಡಬಲ್ಸ್‌ ವಿಭಾಗದಲ್ಲಿ ಎರಡನೇ ಸುತ್ತಿನಲ್ಲೇ ಸೋಲು ಕಂಡ ಬಳಿಕ ಬೋಪಣ್ಣ ಭಾರತದ ಏಕೈಕ ಭರವಸೆ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.