ADVERTISEMENT

ಚೆಸ್‌: ಹರಿಕಾಗೆ ಜಯ

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ಹರಿಕಾ ದ್ರೋಣವಳ್ಳಿ
ಹರಿಕಾ ದ್ರೋಣವಳ್ಳಿ   

ರೆಕ್‌ಜವಿಕ್‌ : ಭಾರತದ ಗ್ರ್ಯಾಂಡ್‌ಮಾಸ್ಟರ್‌ ಹರಿಕಾ ದ್ರೋಣವಳ್ಳಿ ರೆಜ್‌ಕವಿಕ್‌ ಚೆಸ್‌ ಟೂರ್ನಿಯಲ್ಲಿ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನ ದಲ್ಲಿರುವ ಹರಿಕಾ ಮಂಗಳವಾರ ನಡೆದ ಏಳನೇ ಸುತ್ತಿನ ಪಂದ್ಯದಲ್ಲಿ ತಮಗಿಂತ ಕೆಳಗಿನ ರ್‍ಯಾಂಕಿಂಗ್ ಸ್ಥಾನದಲ್ಲಿರುವ ಮಂಗೋಲಿಯಾದ ಇಂಟರ್‌ನ್ಯಾಷನಲ್‌ ಮಾಸ್ಟರ್‌ ತುಶಿಂಗ್ಸ್‌ ಬಟ್‌ಚಿಮೆಗ್ ಅವರನ್ನು ಮಣಿಸಿದರು.

ಐದು ಗಂಟೆ ನಡೆದ ದೀರ್ಘ ಅವ ಧಿಯ ಪಂದ್ಯದಲ್ಲಿ ಹರಿಕಾ ಗೆಲುವು ಒಲಿಸಿಕೊಂಡಿದ್ದಾರೆ.  ಟೂರ್ನಿಯಲ್ಲಿ ಹರಿಕಾ ಐದು ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಒಂದು ಡ್ರಾ ಹಾಗೂ ಒಂದರಲ್ಲಿ ಸೋಲು ಅನುಭವಿಸಿದ್ದಾರೆ. ಒಟ್ಟು 5.5 ಪಾಯಿಂಟ್ಸ್‌ ಇವರ ಬಳಿ ಇವೆ.

ADVERTISEMENT

ಮುಂದಿನ ಸುತ್ತಿನಲ್ಲಿ ಹೈದರಾಬಾದ್‌ನ ಆಟಗಾರ್ತಿ ಟರ್ಕಿಯ ಗ್ರ್ಯಾಂಡ್‌ಮಾಸ್ಟರ್‌ ಮುಸ್ತಫಾ ಯಿಲ್ಮಂಜ್ ಎದುರು ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.