ADVERTISEMENT

ಚೊಚ್ಚಲ ಪ್ರಶಸ್ತಿಗೆ ಒಂದೇ ಹೆಜ್ಜೆ

ಐ–ಲೀಗ್‌: ಇತಿಹಾಸ ಬರೆವ ತವಕದಲ್ಲಿ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಬೆಂಗಳೂರು:  ಐ– ಲೀಗ್‌ ಟೂರ್ನಿ ಯಲ್ಲಿ ಅಮೋಘ ಪ್ರದರ್ಶನ ನೀಡು ತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.

ಇದಕ್ಕಾಗಿ ಬಿಎಫ್‌ಸಿ ಈ ಋತು ವಿನ ಟೂರ್ನಿ ಯಲ್ಲಿ  ಬಾಕಿ ಉಳಿದಿ ರುವ  2 ಪಂದ್ಯಗಳ ಪೈಕಿ ಒಂದ ರಲ್ಲಿ ಗೆಲುವು ದಾಖಲಿಸಬೇಕಿದೆ.
ಇದೇ ಮೊದಲ ಬಾರಿಗೆ ಐ–ಲೀಗ್‌ನಲ್ಲಿ ಪಾಲ್ಗೊಂಡಿರುವ  ಬೆಂಗಳೂರು ಎಫ್‌ಸಿ ತಾನಾಡಿ ರುವ 22 ಪಂದ್ಯಗಳಿಂದ ಒಟ್ಟು 41 ಅಂಕ ಕಲೆಹಾಕಿ   ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಸೋಮವಾರ  ನಡೆಯಲಿರುವ ಪಂದ್ಯದಲ್ಲಿ  ಬಿಎಫ್‌ಸಿ , ಡೆಂಪೊ ಎಸ್‌ಸಿ  ತಂಡದ ಸವಾಲು ಎದುರಿಸಲಿದೆ.  ಈ ಪಂದ್ಯದಲ್ಲಿ ಗೆದ್ದು, ಚಾಂಪಿಯನ್‌ ಪಟ್ಟಕ್ಕೆ  ಅಗತ್ಯವಿರುವ 44 ಅಂಕ ಪಡೆಯುವ ಮೂಲಕ  ಇತಿಹಾಸ ಬರೆಯುವ ಆಲೋಚನೆಯಲ್ಲಿದೆ.

ಬಿಎಫ್‌ಸಿ ಸೋಮವಾರದ ಪಂದ್ಯದಲ್ಲಿ ಡೆಂಪೊ ಎಸ್‌ಸಿಯನ್ನು ಮಣಿಸಿದ್ದೇ ಆದಲ್ಲಿ, ಒಟ್ಟು 38 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಸಲಗಾಂವ್ಕರ್‌ ಎಫ್‌ಸಿ  ಮತ್ತು   37 ಅಂಕ ಹೊಂದಿರುವ  ಈಸ್ಟ್‌ ಬೆಂಗಾಲ್‌  ತಂಡಗಳ ಪ್ರಶಸ್ತಿಯ ಕನಸು ಭಗ್ನಗೊಳ್ಳಲಿದೆ.

ಈ ತಂಡಗಳು ಟೂರ್ನಿಯಲ್ಲಿ ಕ್ರಮವಾಗಿ ಒಂದು ಮತ್ತು ಎರಡು ಪಂದ್ಯ ಗಳನ್ನು ಆಡಬೇಕಿದೆ. ಬಿಎಫ್‌ಸಿ ಗೆದ್ದರೆ ಈ ಪಂದ್ಯಗಳಿಗೆ ಮಹತ್ವವಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.