ADVERTISEMENT

ಜಿಮ್ನಾಸ್ಟಿಕ್ಸ್‌ ವಿಶ್ವಕಪ್: ಅರುಣಾಗೆ ಕಂಚು

ಪಿಟಿಐ
Published 24 ಫೆಬ್ರುವರಿ 2018, 19:58 IST
Last Updated 24 ಫೆಬ್ರುವರಿ 2018, 19:58 IST
ಜಿಮ್ನಾಸ್ಟಿಕ್ಸ್‌ ವಿಶ್ವಕಪ್:  ಅರುಣಾಗೆ ಕಂಚು
ಜಿಮ್ನಾಸ್ಟಿಕ್ಸ್‌ ವಿಶ್ವಕಪ್: ಅರುಣಾಗೆ ಕಂಚು   

ಮೆಲ್ಬರ್ನ್‌: ಹೈದರಾಬಾದಿನ ಅರುಣಾ ಬುದ್ದಾ ರೆಡ್ಡಿ ಇಲ್ಲಿ ನಡೆಯುತ್ತಿರುವ  ಜಿಮ್ನಾಸ್ಟಿಕ್ಸ್‌ ವಿಶ್ವಕಪ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದು  ಇತಿಹಾಸ ರಚಿಸಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟಿಕ್‌ ಪಟು ಎಂಬ ಹಿರಿಮೆಗೆ ಪಾತ್ರರಾದರು.

ಹಿಸೆನ್ಸ್‌ ಅರೆನಾದಲ್ಲಿ ಶನಿವಾರ ನಡೆದ ಮಹಿಳೆಯರ ವಾಲ್ಟ್ ವಿಭಾಗದಲ್ಲಿ  ಅರುಣಾ, 13.649 ಪಾಯಿಂಟ್ಸ್‌ ಕಲೆಹಾಕಿ ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. 2016ರ ರಿಯೊ ಒಲಿಂಪಿಕ್ಸ್‌ನ ವಾಲ್ಟ್‌ ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ದೀಪಾ ಕರ್ಮಾಕರ್‌, 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಆದರೆ ವಿಶ್ವ ಟೂರ್ನಿಯಲ್ಲಿ ಅವರು ಪದಕದ ಸಾಧನೆ ಮಾಡಿಲ್ಲ.

13.800 ಪಾಯಿಂಟ್ಸ್‌ ಗಳಿಸಿದ ಸ್ಲೊವೇನಿಯಾದ ತಜಾಸ ಕೈಸ್ಲೆಫ್‌, ಚಿನ್ನ ಪದಕ ಗೆದ್ದರು.   ಆಸ್ಟ್ರೇಲಿಯಾದ ಎಮಿಲಿ ವೈಟ್‌ಹೆಡ್‌ (13.699 ಪಾಯಿಂಟ್ಸ್‌) ಬೆಳ್ಳಿ ಪದಕ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.