ADVERTISEMENT

ಜೂನಿಯರ್‌ ಟೆನಿಸ್ ಆಟಗಾರರ ತರಬೇತಿಗೆ ನೆರವು

ಪಿಟಿಐ
Published 27 ಮೇ 2017, 19:30 IST
Last Updated 27 ಮೇ 2017, 19:30 IST

ಪ್ಯಾರಿಸ್‌: ಜೂನಿಯರ್ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡುವ ಆಟಗಾರರು ಪ್ರತಿನಿಧಿಸುವ ದೇಶಗಳಿಗೆ ₹ 7.20 ಕೋಟಿ ನೀಡಲು ಫ್ರೆಂಚ್ ಟೆನಿಸ್‌ ಫೆಡರೇಷನ್ (ಎಫ್‌ಎಫ್‌ಟಿ) ನಿರ್ಧರಿಸಿದೆ.

ತರಬೇತಿ ಮತ್ತು ಕ್ರೀಡಾ ಅಭಿವೃದ್ಧಿ ಗಾಗಿ ಈ ಮೊತ್ತವನ್ನು ಆಯಾ ದೇಶಗಳು ಬಳಸಿಕೊಳ್ಳಬೇಕು. ಆಡಿದ ಪಂದ್ಯಗಳು ಮತ್ತು ಗೆಲುವಿನ ಆಧಾರದಲ್ಲಿ ಆಟಗಾರ ರಿಗೆ ಎಫ್‌ಎಫ್‌ಟಿ ಪಾಯಿಂಟ್ ನೀಡಲಿದೆ. ಈ ಪಾಯಿಂಟ್‌ಗಳ ಆಧಾರದಲ್ಲಿ ಪ್ರತಿ ದೇಶಕ್ಕೂ ರ‍್ಯಾಂಕ್‌ ನೀಡಿ ನಗದು ಬಹುಮಾನ ವಿತರಿಸಲಿದೆ.

‘ಫಿಲಿಪ್‌ ಮತ್ತು ಚಾಟ್ರಿಯರ್‌ ಹೆಸರಿನಲ್ಲಿ ಈ ಪದ್ಧತಿಯನ್ನು ಆರಂಭಿಸ ಲಾಗುವುದು. ಕಿರಿಯ ಆಟಗಾರರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ನೆರವಾಗಲಿ ಎಂಬುದೇ ಈ ಯೋಜನೆಯ ಆಶಯ’ ಎಂದು ಎಫ್‌ಎಫ್‌ಟಿ ಅಧ್ಯಕ್ಷ ಬರ್ನಾರ್ಡ್‌ ಗಿಡ್ಸೆಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.