ADVERTISEMENT

ಟಿಟಿ: ಭಾರತ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಚಿನ್ನ ಗೆದ್ದ ಭಾರತ ತಂಡದವರು ತ್ರಿವರ್ಣ ಧ್ವಜ ಹಿಡಿದು ಖುಷಿಪಟ್ಟರು.
ಚಿನ್ನ ಗೆದ್ದ ಭಾರತ ತಂಡದವರು ತ್ರಿವರ್ಣ ಧ್ವಜ ಹಿಡಿದು ಖುಷಿಪಟ್ಟರು.   

ಬೆಂಗಳೂರು: ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಕರ್ನಾಟಕದ ಭರವಸೆಯ ಟೇಬಲ್‌ ಟೆನಿಸ್ ಆಟಗಾರ್ತಿ ಅರ್ಚನಾ ಕಾಮತ್‌ ಸಾಧನೆಗಳ ಮುಕುಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.

ಬೆಲ್ಜಿಯಂನ ಸ್ಪಾದಲ್ಲಿ ನಡೆದ ಐಟಿ ಟಿಎಫ್‌ ಜೂನಿಯರ್‌ ಸರ್ಕಿಟ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ 18 ವರ್ಷದ ಒಳಗಿನವರ ಬಾಲಕಿಯರ ವಿಭಾಗದಲ್ಲಿ ಭಾರತ ತಂಡ ಚಿನ್ನದ ಸಾಧನೆ ಮಾಡಿದೆ. ಈ ತಂಡದಲ್ಲಿ ಅರ್ಚನಾ, ಮೌಮಿತಾ ದತ್ತಾ ಮತ್ತು ಪ್ರಿಯಾಂಕ ಪರೇಖ್‌ ಇದ್ದರು.

ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡ 3–2ರಲ್ಲಿ  ಅಮೆರಿಕ, ಕ್ರೊಯೇಷ್ಯಾ ಮತ್ತು ಇಂಗ್ಲೆಂಡ್  ಸ್ಪರ್ಧಿಗಳನ್ನು ಒಳಗೊಂಡಿದ್ದ ಮಿಶ್ರ ತಂಡದ ಎದುರು ಗೆಲುವು ಪಡೆಯಿತು. 15 ವರ್ಷದ ಒಳಗಿನವರ ಕೆಡೆಟ್ ವಿಭಾಗದಲ್ಲಿ  ಭಾರತದ ಬಾಲಕಿ ಯರ ತಂಡ ಚಿನ್ನದ ಸಾಧನೆ ಮಾಡಿತು.

ಫೈನಲ್‌ನಲ್ಲಿ ಭಾರತ 3–1ರಲ್ಲಿ  ಹಂಗರಿ ತಂಡವನ್ನು ಮಣಿಸಿತು. ಭಾರತದ ಜೂನಿ ಯರ್ ಮತ್ತು ಕೆಡೆಟ್‌ ಬಾಲಕರ ತಂಡ ದವರು  ಕಂಚಿನ ಪದಕ  ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT