ADVERTISEMENT

ಟೆನಿಸ್‌: ಸಿಮ್ರನ್‌ಗೆ ಪ್ರಶಸ್ತಿ ಡಬಲ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:48 IST
Last Updated 27 ಆಗಸ್ಟ್ 2016, 19:48 IST
ಸಿಮ್ರನ್‌ ಕೇಜ್ರಿವಾಲ್‌
ಸಿಮ್ರನ್‌ ಕೇಜ್ರಿವಾಲ್‌   

ಬೆಂಗಳೂರು: ಅಮೋಘ ಆಟ ಆಡಿದ ಮಹಾರಾಷ್ಟ್ರದ  ಸಿಮ್ರನ್‌ ಕೇಜ್ರಿವಾಲ್‌ ಅವರು ಕೆಎಸ್‌ಎಲ್‌ಟಿಎ ಆಶ್ರಯದ ಎಐಟಿಎ 50ಕೆ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಶನಿವಾರ ನಡೆದ ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸಿಮ್ರನ್‌ 6–2, 6–4 ರ ನೇರ ಸೆಟ್‌ಗಳಿಂದ ಕರ್ನಾಟಕದ ಎಸ್‌.ಬಿ. ಅಪೂರ್ವ  ಅವರನ್ನು ಮಣಿಸಿದರು.

ಡಬಲ್ಸ್‌ ವಿಭಾಗದಲ್ಲಿ ತಮಿಳು ನಾಡಿನ ಆರತಿ ಮುನಿಯನ್‌  ಮತ್ತು ಸಿಮ್ರನ್‌ ಜೋಡಿಗೆ ‘ವಾಕ್‌ ಓವರ್‌’ ಲಭಿಸಿತು. ಫೈನಲ್‌ನಲ್ಲಿ ಸಿಮ್ರನ್‌ ಮತ್ತು ಆರತಿ ಅವರು ಕರ್ನಾಟಕದ ಎಸ್‌.ಬಿ. ಅಪೂರ್ವ ಮತ್ತು ಕೆ. ಸಿಮ್ರನ್‌ ವಿರುದ್ಧ ಆಡಬೇಕಿತ್ತು. ಆದರೆ ಎದುರಾಳಿಗಳು ಪಂದ್ಯದಿಂದ ಹಿಂದೆ ಸರಿದ ಕಾರಣ ಆಯೋಜಕರು ಸಿಮ್ರನ್‌ ಮತ್ತು ಆರತಿ ಅವರನ್ನು ವಿಜಯಿ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.