ADVERTISEMENT

ಟೆಸ್ಟ್ : ಹೊರಬಿದ್ದ ಸೌಥಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST

ಹ್ಯಾಮಿಲ್ಟನ್‌ (ಐಎಎನ್‌ಎಸ್‌): ಗಾಯ ಗೊಂಡಿರುವ ನ್ಯೂಜಿಲೆಂಡ್‌ ತಂಡದ ಪ್ರಮುಖ ಬೌಲರ್‌ ಹಾಗೂ ಉಪ ನಾಯಕ ಟಿಮ್ ಸೌಥಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಗುರುವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಸೌಥಿ ಅವರ ಮಂಡಿಗೆ ಗಾಯವಾದ ಕಾರಣ ಶನಿವಾರ ಆರಂಭವಾಗುವ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಟ್ರೆಂಟ್ ಬೋಲ್ಟ್ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಕೂಡ ಈಗಾಗಲೇ ಗಾಯಗೊಂಡಿ ರುವು ದರಿಂದ ನ್ಯೂಜಿಲೆಂಡ್ ಈಗ ಪ್ರಮುಖ ಆಟಗಾರರ ಕೊರತೆ ಎದುರಿ ಸುತ್ತಿದೆ.

ಸೌಥಿ ಅವರ ಬದಲು ತಂಡದಲ್ಲಿ ನೀಲ್ ವಾಗ್ನರ್‌, ಮ್ಯಾಟ್ ಹೆನ್ರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಆಲ್ ರೌಂಡರ್‌ ಕೊಲಿನ್ ಡೆ ಗ್ರ್ಯಾಂಡ್‌ಹೋಮ್ ಮತ್ತು ಜಿಮ್ಮಿ ನೀಶಮ್ ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ.  ಸೆಪ್ಟೆಂಬರ್‌ನಲ್ಲಿ ಭಾರತ ದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ವೇಳೆ ಕೂಡ ಸೌಥಿ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಅವರ ಬಲಗೈ ಬರೆಳಿಗೆ ಗಾಯವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.