ADVERTISEMENT

ಡ್ರಾ ಪಂದ್ಯದಲ್ಲಿ ಐಡಿಯಲ್‌ ಎಸ್‌ಸಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST

ಬೆಂಗಳೂರು: ಐಡಿಯಲ್‌ ಎಸ್‌ಸಿ ಕೆಜಿಎಫ್‌ ‘ಬಿ’ ತಂಡ ಇಲ್ಲಿ ನಡೆಯುತ್ತಿರುವ ಬಿಎಚ್‌ಎ ವತಿಯ ‘ಬಿ’ ಡಿವಿಷನ್‌ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಡ್ರಾ ಮಾಡಿಕೊಂಡಿದೆ.

ಐಡಿಯಲ್ ಎಸ್‌ಸಿ 1–1 ಗೋಲಿನಿಂದ ಅಧಿಯಾಮಾನ್ ಕಾಲೇಜು ತಂಡದ ಎದುರು ಡ್ರಾ ಮಾಡಿಕೊಂಡಿದೆ. ನಿಗಧಿತ ವೇಳೆಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು.

ಐಡಿಯಲ್ ತಂಡದ ಪರ ಅಧಿಜಿತ್‌ 5ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಅಧಿಯಾಮಾನ್‌ ತಂಡದ ಪರ ಕಾರ್ತಿಕೇಯನ್‌ 21ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲಕ್ಕೆ ಕಾರಣರಾದರು.

ADVERTISEMENT

ಇಂದಿನ ಪಂದ್ಯ: ಐಡಿಯಲ್‌ ಎಸ್‌ ಹಾಗೂ ಏರ್‌ ಇಂಡಿಯಾ ‘ಬಿ‘. ಸಮಯ: ಮಧ್ಯಾಹ್ನ 3.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.