ADVERTISEMENT

ಡ್ವೇನ್ ಬ್ರಾವೋ ಬದಲು ಲಯನ್ಸ್‌ ತಂಡ ಸೇರಿದ ಇರ್ಫಾನ್‌ ಪಠಾಣ್‌

ಏಜೆನ್ಸೀಸ್
Published 25 ಏಪ್ರಿಲ್ 2017, 14:21 IST
Last Updated 25 ಏಪ್ರಿಲ್ 2017, 14:21 IST
ಡ್ವೇನ್ ಬ್ರಾವೋ ಬದಲು ಲಯನ್ಸ್‌ ತಂಡ ಸೇರಿದ ಇರ್ಫಾನ್‌ ಪಠಾಣ್‌
ಡ್ವೇನ್ ಬ್ರಾವೋ ಬದಲು ಲಯನ್ಸ್‌ ತಂಡ ಸೇರಿದ ಇರ್ಫಾನ್‌ ಪಠಾಣ್‌   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡ್‌ ಆಟಗಾರ ಇರ್ಫಾನ್‌ ಪಠಾಣ್‌ ಅವರು ಡ್ವೇನ್‌ ಬ್ರಾವೋ ಬದಲು ಗುಜರಾತ್ ಲಯನ್ಸ್‌ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಬಹುದಿನಗಳಿಂದ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ₹50ಲಕ್ಷ ಮೂಲ ಬೆಲೆ ಹೊಂದಿದ್ದ ಪಠಾಣ್‌ರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸಿರಲಿಲ್ಲ. ಹಾಗಾಗಿ ಮಾರಾಟವಾಗದ ಆಟಗಾರರ ಸಾಲಿನ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದರು.

ಲಯನ್ಸ್‌ ತಂಡದ ಪ್ರಮುಖ ಆಟಗಾರ ವೆಸ್ಟ್‌ ಇಂಡೀಸ್‌ನ ಡ್ವೇನ್‌ ಬ್ರಾವೋ ಸ್ನಾಯು ಸೆಳೆತದ ಶಸ್ತ್ರಚಿಕಿತ್ಸೆಗೊಳಗಾಗಿರುವ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಅವರ ಸ್ಥಾನದಲ್ಲಿ ಪಠಾಣ್‌ಗೆ ಸ್ಥಾನ ಲಭಿಸಿದೆ. ಕಳೆದ ಒಂಭತ್ತು ಐಪಿಎಲ್ ಸೀಸನ್‌ಗಳಲ್ಲಿ ಆಡಿದ ಅನುಭವ ಇರುವ ಪಠಾಣ್‌ ಸೇರ್ಪಡೆ ತಂಡಕ್ಕೆ ಹೊಸ ಚೈತನ್ಯ ನೀಡಿದೆ.

ADVERTISEMENT

ಸದ್ಯ ಐಪಿಎಲ್‌–2017ರಲ್ಲಿ ಎಂಟು ತಂಡಗಳು ಆಡುತ್ತಿದ್ದು, ತಾನಾಡಿರುವ ಒಟ್ಟು 7 ಪಂದ್ಯಗಳಲ್ಲಿ  ಐದು ಸೋಲು ಕಂಡಿರುವ ಲಯನ್ಸ್‌ ಕೇವಲ ಎರಡರಲ್ಲಿ ಗೆಲುವು ಸಾಧಿಸಿದ್ದು ಏಳನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.