ADVERTISEMENT

ತವರಿಗೆ ತೆರಳಲಿರುವ ಇಂಗ್ಲೆಂಡ್‌ ತಂಡದ ಅಲೆಕ್ಸ್ ಹೇಲ್ಸ್‌

ಪಿಟಿಐ
Published 20 ಜನವರಿ 2017, 19:40 IST
Last Updated 20 ಜನವರಿ 2017, 19:40 IST
ತವರಿಗೆ ತೆರಳಲಿರುವ ಇಂಗ್ಲೆಂಡ್‌ ತಂಡದ  ಅಲೆಕ್ಸ್ ಹೇಲ್ಸ್‌
ತವರಿಗೆ ತೆರಳಲಿರುವ ಇಂಗ್ಲೆಂಡ್‌ ತಂಡದ ಅಲೆಕ್ಸ್ ಹೇಲ್ಸ್‌   

ಕಟಕ್: ಭಾರತ ವಿರುದ್ಧ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಇಂಗ್ಲೆಂಡ್ ತಂಡದ ಅಲೆಕ್ಸ್‌ ಹೇಲ್ಸ್‌ ಅವರು ತವರಿಗೆ ತೆರಳಲಿದ್ದಾರೆ.

ಆದ್ದರಿಂದ ಇನ್ನುಳಿದ ಒಂದು ಏಕದಿನ ಮತ್ತು ಮೂರು ಪಂದ್ಯಗಳ ಟ್ವೆಂಟಿ–20 ಸರಣಿಗೆ ಅವರು ಅಲಭ್ಯರಾಗಿದ್ದಾರೆ. ಪಂದ್ಯದ ವೇಳೆ ಹೇಲ್ಸ್‌ ಅವರ  ಬಲಗೈಗೆ ಬಲವಾಗಿ ಪೆಟ್ಟು ಬಿದ್ದಿದೆ.

‘ನಮ್ಮ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಗಾಯಗೊಂಡಿ ರುವ ಕಾರಣ ಭಾರತ ವಿರುದ್ಧದ ಇನ್ನುಳಿದ ಪಂದ್ಯಗಳಲ್ಲಿ ಆಡುವುದಿಲ್ಲ. ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸ ಲಾಗಿತ್ತು. ಶನಿವಾರ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ’ ಎಂದು ತಂಡದ ಮೂಲಗಳು ಮಾಹಿತಿ ನೀಡಿವೆ.

ಅಲೆಕ್ಸ್ ಬದಲು ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದೆ. ಅಲೆಕ್ಸ್‌ ಹೇಲ್ಸ್‌ ಅವರು ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.