ADVERTISEMENT

ದ್ವಿತಕ ಗಳಿಸಿ ಮಿಂಚಿದ ಕುಕ್‌

ಏಜೆನ್ಸೀಸ್
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ದ್ವಿಶತಕ ಸಿಡಿಸಿದ ಕುಕ್‌ ಔಟ್‌ ಆಗಿ ಮರಳಿದಾಗ ವೆಸ್ಟ್ ಇಂಡೀಸ್ ತಂಡದ ಆಟಗಾರರು ಅಭಿನಂದಿಸಿದರು - ರಾಯಿಟರ್ಸ್ ಚಿತ್ರ
ದ್ವಿಶತಕ ಸಿಡಿಸಿದ ಕುಕ್‌ ಔಟ್‌ ಆಗಿ ಮರಳಿದಾಗ ವೆಸ್ಟ್ ಇಂಡೀಸ್ ತಂಡದ ಆಟಗಾರರು ಅಭಿನಂದಿಸಿದರು - ರಾಯಿಟರ್ಸ್ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಅಲಸ್ಟರ್‌ ಕುಕ್‌ ಅವರ ದ್ವಿಶತಕ ಮತ್ತು ಜೇಮ್ಸ್  ಆ್ಯಂಡರ್ಸನ್‌ ಅವರ ಪ್ರಭಾವಿ ದಾಳಿಯ ನೆರವಿನಿಂದ ಆತಿ ಥೇಯ ಇಂಗ್ಲೆಂಡ್ ತಂಡದವರು ಇಲ್ಲಿ ನಡೆಯುತ್ತಿರುವ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿದೆ. ಆತಿ ಥೇಯರು ಗಳಿಸಿದ ಭಾರಿ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್‌ ಎರಡನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡಿತು.

ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ 3 ವಿಕೆಟ್‌ಗಳಿಗೆ 348 ರನ್‌ ಗಳಿಸಿದ್ದ ಇಂಗ್ಲೆಂಡ್‌ ಎರಡನೇ ದಿನ ಎಂಟು ವಿಕೆಟ್‌ಗಳಿಗೆ 514 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ಇನಿಂಗ್ಸ್‌ಗೆ  ಕುಕ್‌ ಮತ್ತು ಜೋ ರೂಟ್‌ (136; 189 ಎಸೆತ, 22 ಬೌಂಡರಿ) ಬಲ ತುಂಬಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 248 ರನ್ ಸೇರಿಸಿದರು. ನಂತರ ಕುಕ್ ಅವರಿಗೆ ಡೇವಿಡ್‌ ಮಲಾನ್‌ ಉತ್ತಮ ಸಹಕಾರ ನೀಡಿದರು.

ಇವರಿಬ್ಬರ ಶತಕದ ಜೊತೆಯಾಟದಿಂದ ತಂಡ 400ರ ಮೊತ್ತ ದಾಟಿತು. ಮಲಾನ್‌ 139 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 65 ರನ್‌ ಗಳಿಸಿದರು.

ಮೊದಲ ದಿನ 276 ಎಸೆತಗಳಲ್ಲಿ 153 ರನ್‌ ಗಳಿಸಿದ್ದ ಕುಕ್‌ ಶುಕ್ರವಾರ ಮತ್ತಷ್ಟು ಪ್ರಭಾವಿ ಆಟವಾಡಿ ದ್ವಿಶತಕ ಬಾರಿಸಿದರು. ಟೆಸ್ಟ್‌ನಲ್ಲಿ ವೈಯಕ್ತಿಕ ನಾಲ್ಕನೇ ದ್ವಿಶತಕದ ಸಾಧನೆ ಮಾಡಿ ದರು. ಕಳೆದ 16 ಇನಿಂಗ್ಸ್‌ಗಳಲ್ಲಿ ಶತಕದ ಬರ ಅನುಭವಿಸಿದ್ದ ಮಾಜಿ ನಾಯಕ ಕುಕ್‌ ಇಲ್ಲಿ ಒಟ್ಟು 33 ಬೌಂಡರಿಗಳನ್ನು ಸಿಡಿಸಿದರು.

ಹತ್ತನೇ ಬಾರಿ 150ಕ್ಕೂ ಹೆಚ್ಚು ರನ್‌ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಕೈಲ್ ಹೋಪ್ ಎಸೆತವನ್ನು ಬೌಂಡರಿಗೆ ಅಟ್ಟಿ ಕುಕ್‌ ದ್ವಿಶಕತ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌ (ಗುರುವಾರ 3ಕ್ಕೆ348) 135.5 ಓವರ್‌ಗಳಲ್ಲಿ 8ಕ್ಕೆ514 ಡಿಕ್ಲೇರ್‌ (ಅಲೆಸ್ಟರ್ ಕುಕ್‌ 243, ಮಲಾನ್‌ 65; ರಾಂಚ್‌ 86ಕ್ಕೆ2, ಪ್ಯಾಟ್ ಕಮಿನ್ಸ್‌ 87ಕ್ಕೆ1, ಹೋಲ್ಡರ್‌ 103ಕ್ಕೆ1); ವೆಸ್ಟ್‌ ಇಂಡೀಸ್‌: 16 ಓವರ್‌ಗಳಲ್ಲಿ 1ಕ್ಕೆ44 (ಕೀರನ್ ಪೊವೆಲ್‌ 18, ಹೋಪ್‌ 25).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.