ADVERTISEMENT

ನಾಳೆಯಿಂದ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ರಾಜ್ಯ ರಣಜಿ ತಂಡದ ಮಾಜಿ ನಾಯಕ ಕೆ. ತಿಮ್ಮಪ್ಪಯ್ಯ ಅವರ ಹೆಸರಿನಲ್ಲಿ ನಡೆಯುವ ಆಹ್ವಾನಿತ ಕ್ರಿಕೆಟ್‌ ಟೂರ್ನಿ ಶುಕ್ರವಾರ ಆರಂಭವಾಗಲಿದ್ದು ಒಟ್ಟು 16 ತಂಡಗಳು ಪೈಪೋಟಿ ನಡೆಸಲಿವೆ. ರಾಜ್ಯದ ಮೂರು ತಂಡಗಳು  ಪಾಲ್ಗೊಳ್ಳಲಿವೆ.

ಕೆಎಸ್‌ಸಿಎ ಇಲೆವೆನ್‌, ಕೆಎಸ್‌ಸಿಎ ಕೋಲ್ಟ್ಸ್‌ ಮತ್ತು ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿರುವ ರಾಜ್ಯದ ತಂಡಗಳು.  ಇನ್ನುಳಿದಂತೆ ಹಿಮಾಚಲ ಪ್ರದೇಶ, ಒಡಿಶಾ, ತ್ರಿಪುರ, ಡಿ.ವೈ. ಪಾಟೀಲ್‌ ಅಕಾಡೆಮಿ, ಕೇರಳ, ಬಂಗಾಳ, ಮುಂಬೈ, ಪಂಜಾಬ್‌, ಆಂಧ್ರ, ಗುಜರಾತ್‌, ಬರೋಡ, ಹರಿಯಾಣ ಮತ್ತು ವಿದರ್ಭ ಪಾಲ್ಗೊಳ್ಳಲಿವೆ. ಈ ಟೂರ್ನಿ ಮುಂಬರುವ ರಣಜಿ ಪಂದ್ಯಗಳ ಅಭ್ಯಾಸಕ್ಕೆ ವೇದಿಕೆ ಎನಿಸಿದೆ.

ಒಟ್ಟು 16 ತಂಡಗಳ ಪೈಕಿ ತಲಾ ನಾಲ್ಕು ತಂಡಗಳನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಮುಂಬೈ, ಪಂಜಾಬ್‌, ಆಂಧ್ರ ಮತ್ತು ಗುಜರಾತ್ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದು ಗುಂಪಿನ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ.

ನಾಲ್ಕು ದಿನಗಳ ತನ್ನ ಮೊದಲ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್ ತಂಡ  ತ್ರಿಪುರ ವಿರುದ್ಧ ಆಡಲಿದೆ. ಬುಧವಾರ  ರಾಜ್ಯ ಕ್ರಿಕೆಟ್‌ ಸಂಸ್ಥೆ ಕರ್ನಾಟಕ ತಂಡಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಾಜ್ಯ ತಂಡಗಳು: ಕೆಎಸ್‌ಸಿಎ ಇಲೆವೆನ್‌: ಸಿ.ಎಂ. ಗೌತಮ್‌ (ನಾಯಕ), ಮಯಂಕ್‌ ಅಗರವಾಲ್‌, ಆರ್‌. ಸಮರ್ಥ್‌, ಅಭಿಷೇಕ್ ರೆಡ್ಡಿ, ಶಿಶಿರ್‌ ಭವಾನೆ, ಕೆ.ವಿ. ಸಿದ್ದಾರ್ಥ್‌, ಶ್ರೇಯಸ್‌ ಗೋಪಾಲ್‌, ಅಬ್ರಾರ್ ಖಾಜಿ, ರೋನಿತ್ ಮೋರೆ, ಡೇವಿಡ್‌ ಮಥಾಯಿಸ್, ಎಸ್‌.ಎಲ್‌. ಅಕ್ಷಯ್‌, ಕೆ. ಗೌತಮ್‌, ಎಂ.ಜಿ. ನವೀನ್‌, ರೋಹಿತ್ ಗೌಡ ಮತ್ತು ವಿ. ಕೌಶಿಕ್‌. ಕೋಚ್‌: ಜೆ. ಅರುಣ್‌ ಕುಮಾರ್‌.

ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌: ಕೆ.ಬಿ. ಪವನ್‌ (ನಾಯಕ), ಡಿ. ನಿಶ್ಚಲ್‌, ಮೀರ್‌ ಕೌನೇನ್‌   ಅಬ್ಬಾಸ್‌, ಲಿಯಾನ್ ಖಾನ್‌, ಅನಿರುದ್ಧ್‌ ಜೋಶಿ, ಸಾದಿಕ್‌ ಕಿರ್ಮಾನಿ, ಕೆ.ಸಿ. ಕಾರಿಯಪ್ಪ,  ಜೆ. ಸುಚಿತ್‌, ಪ್ರಸಿದ್ಧ ಕೃಷ್ಣ, ಎಚ್‌.ಎಸ್‌. ಶರತ್‌, ಆದಿತ್ಯ ಸೋಮಣ್ಣ, ಸತೀಶ್ ಭಾರದ್ವಾಜ್‌, ವಿ. ವಿಜಯ ಕುಮಾರ್, ಅನುರಾಗ್ ಬಜಪೈ ಮತ್ತು ರೋಹನ್‌ ಕದಮ್‌. ಕೋಚ್‌: ಪಿ.ವಿ. ಶಶಿಕಾಂತ್‌.

ಕೆಎಸ್‌ಸಿಎ ಕೋಲ್ಟ್ಸ್‌: ಪವನ್ ದೇಶಪಾಂಡೆ (ನಾಯಕ), ನಿಕಿನ್‌ ಜೋಸ್‌, ಅರ್ಜುನ್‌ ಹೊಯ್ಸಳ, ಅಭಿನವ್‌ ಮನೋಹರ, ನಾಗಭರತ್‌, ಜಿ.ಎಸ್‌. ಚಿರಂಜೀವಿ, ಮಿತ್ರಕಾಂತ್‌ ಯಾದವ್‌, ಪ್ರವೀಣ್‌ ದುಬೆ, ಪ್ರತೀಕ್‌ ಜೈನ್‌, ಭವೇಶ್‌ ಗುಲೇಚಾ, ಶರಣ ಗೌಡ, ಜೀಶನ್‌ ಅಲಿ ಸೈಯದ್‌, ಮಿಲಿಂದ್ ಆರ್‌. ರಮೇಶ್‌, ಬಿ.ಆರ್‌. ಶರತ್‌ ಮತ್ತು ಲಿಖಿತ್ ಬನ್ನೂರ. ಕೋಚ್‌: ಜಿ.ಕೆ. ಅನಿಲ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.