ADVERTISEMENT

ಪಾದದ ಗಾಯ ಟೆಸ್ಟ್‌ ಸರಣಿಯಿಂದ ಮಿಚೆಲ್‌ ಸ್ಟಾರ್ಕ್‌ ಔಟ್‌

ಪಿಟಿಐ
Published 10 ಮಾರ್ಚ್ 2017, 11:42 IST
Last Updated 10 ಮಾರ್ಚ್ 2017, 11:42 IST
ಮಿಚೆಲ್‌ ಸ್ಟಾರ್ಕ್‌
ಮಿಚೆಲ್‌ ಸ್ಟಾರ್ಕ್‌   

ರಾಂಚಿ: ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಅವರು ಬಲಗಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಉಳಿದ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಪುಣೆ ಮತ್ತು ಬೆಂಗಳೂರಿನಲ್ಲಿ ನಡೆದ ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ 5 ವಿಕೆಟ್‌ ಪಡೆದಿದ ಸ್ವಾರ್ಕ್‌, ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡು ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಸ್ಟಾರ್ಕ್‌ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಿದೆ.

ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಸ್ಟಾರ್ಕ್ ಅವರಿಗೆ ಬಲಪಾದದ ನೋವು ಕಾಣಿಸಿಕೊಂಡಿತ್ತು. ಆದರೆ, ನೋವು ಮತ್ತಷ್ಟು ಹೆಚ್ಚಾದ ಕಾರಣ ಅವರ ಪಾದವನ್ನು ಸ್ಕ್ಯಾನ್ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದು, ಸ್ಟಾರ್ಕ್ ಆಸ್ಟ್ರೇಲಿಯಾಗೆ ತೆರಳಲ್ಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಥೆರಪಿಸ್ಟ್ ಡೇವಿಡ್ ಬೇಕ್ಲ್ ತಿಳಿಸಿದ್ದಾರೆ.

ಬೆಂಗಳೂರುನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಭುಜದ ನೋವಿಗೆ ತುತ್ತಾದ ಮಿಚೆಲ್‌ ಮಾರ್ಷ್‌ ಈಗಾಗಲೇ ಸರಣಿಯಿಂದ ಹೊರಬಿದಿದ್ದು, ಸ್ವದೇಶಕ್ಕೆ ಮರಳಿದ್ದಾರೆ. ಈದೀಗ ಸ್ಟಾರ್ಕ್‌ ಅವರು ಗಾಯಗೊಂಡಿದ್ದು ಆಸ್ಟ್ರೇಲಿಯಾ ತಂಡದ ಹಿನ್ನಡೆಗೆ ಕಾರಣವಾಗಿದೆ.

ನಾಲ್ಕು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಮಾರ್ಚ್‌ 16ರಿಂದ ರಾಂಚಿಯಲ್ಲಿ ಭಾರತ– ಆಸ್ಟ್ರೇಲಿಯಾದ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT