ADVERTISEMENT

ಪ್ಯಾರಾ ಬ್ಯಾಡ್ಮಿಂಟನ್: ಸುಕಾಂತ್‌ಗೆ ಎರಡು ಕಂಚು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST

ಮುಂಬೈ (ಪಿಟಿಐ): ಭಾರತದ ಶ್ರೇಯಾಂಕ ರಹಿತ ಆಟಗಾರ ಸುಕಾಂತ್‌ ಕದಮ್‌ ಸ್ಪೇನ್‌ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಎಡಗಾಲು ಅಂಗವೈಕಲ್ಯ ಇರುವ 24 ವರ್ಷದ ಆಟಗಾರ ಸುಕಾಂತ್‌ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ 15–21, 10–21ರಲ್ಲಿ  ನೇರ ಗೇಮ್‌ಗಳಿಂದ ಫ್ರಾನ್ಸ್‌ನ ಅಗ್ರಗಣ್ಯ  ಆಟಗಾರ ಲೂಕಸ್‌ ಮಜೂರ್ ಎದುರು ಸೋಲು ಅನುಭವಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಡಬಲ್ಸ್ ವಿಭಾಗದಲ್ಲಿ ಸುಕಾಂತ್ ಹಾಗೂ ಉಮೇಶ್‌ ವಿಕ್ರಮ್ ಕುಮಾರ್  ಜೋಡಿ 21–17, 13–21, 13–21ರಲ್ಲಿ ಎರಡನೇ ಶ್ರೇಯಾಂಕದ ಇಂಗ್ಲೆಂಡ್‌ನ ಡೇನಿಯಲ್ ಬೆತನೆಲ್ ಹಾಗೂ ಬಾಬಿ ಗ್ರಿಫಿನ್ ವಿರುದ್ಧ ಸೋಲು ಕಂಡಿತು.2016ರಲ್ಲಿ ಸುಕಾಂತ್‌ ಐರ್ಲೆಂಡ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಂಚು ಜಯಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.