ADVERTISEMENT

ಪ್ರಾಯೋಜಕತ್ವ ಪಡೆದ ಪ್ರಯಾಗ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:16 IST
Last Updated 4 ಜುಲೈ 2015, 20:16 IST

ನವದೆಹಲಿ (ಪಿಟಿಐ): ಪ್ರಸಿದ್ಧ ಕಂಪೆನಿ ಪ್ರಯಾಗ್‌ ಜುಲೈ 10 ರಿಂದ ನಡೆಯುವ ಭಾರತ ಮತ್ತು ಜಿಂಬಾಬ್ವೆ ನಡುವಣ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಟೈಟಲ್‌ ಪ್ರಾಯೋಜಕತ್ವವನ್ನು ತನ್ನದಾಗಿಸಿಕೊಂಡಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಣ ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟ್ವೆಂಟಿ–20 ಸರಣಿಗೆ ಪ್ರಯಾಗ್‌ ಕಪ್‌ ಎಂದು ಹೆಸರಿಡಲಾಗಿದೆ. ಪ್ರಯಾಗ್‌ ಹಿಂದೆ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸಹ ಪ್ರಾಯೋಜಕತ್ವ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.