ADVERTISEMENT

ಫೈನಲ್‌ಗೆ ಲೀ ಚಾಂಗ್‌ ವೀ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:34 IST
Last Updated 11 ಮಾರ್ಚ್ 2017, 19:34 IST

ಬರ್ಮಿಂಗ್‌ಹ್ಯಾಮ್ : ಅಗ್ರಶ್ರೇಯಾಂಕದ ಆಟಗಾರ, ಮಲೇಷ್ಯಾದ  ಲೀ ಚಾಂಗ್ ವೀ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಚಾಂಗ್ 10–21, 21–14, 21–9ರಲ್ಲಿ ಚೀನಾ ತೈಪೆಯ ಚು ತಿಯೆನ್‌ ಚೆನ್‌ ಅವರನ್ನು ಮಣಿಸಿದರು.
ಮೂರು ಬಾರಿ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಚಾಂಗ್‌ 27 ವರ್ಷದ ತೈಪೆಯ ಆಟಗಾರನಿಗೆ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಗೇಮ್‌ನಲ್ಲಿ ಚಾಂಗ್ ತಮ್ಮ ಅನಗತ್ಯ ತಪ್ಪುಗಳಿಂದ ಸೋಲು ಕಂಡಿದ್ದರು. ಆದರೆ ಉಳಿದ ಎರಡು ಗೇಮ್‌ಗಳಲ್ಲಿ ತಮ್ಮ ನೈಜ ಆಟ ಆಡಿದರು.

ಮೊದಲ ಗೇಮ್‌ನ ಆರಂಭದಲ್ಲಿ ಚಾಂಗ್‌ ವೇಗವಾಗಿ ಪಾಯಿಂಟ್ಸ್‌ ಕಲೆ ಹಾಕಿ ಗೆಲುವಿನ ಭರವಸೆ ಮೂಡಿಸಿದ್ದ ರಾದರೂ ಎದುರಾಳಿ ಆಟಗಾರನ ನಿಖರ ಸ್ಮಾಷ್‌ಗಳಿಗೆ ಕರಾರುವಾಕ್ಕಾದ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಆದ ಕಾರಣ ಆರಂಭಿಕ ಗೇಮ್‌ನಲ್ಲಿ ಮುನ್ನಡ ಲಭಿಸಲಿಲ್ಲ.

ADVERTISEMENT

ಲಿನ್ ಡಾನ್‌ ಹಾಗೂ ಶಿ ಯೂಕಿ ವಿರುದ್ಧದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಜಯಗಳಿಸಿದ ಆಟಗಾರನ ಎದುರು ಲೀ ಚಾಂಗ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.