ADVERTISEMENT

ಬಾಲ್‌ಬ್ಯಾಡ್ಮಿಂಟನ್: ಕರ್ನಾಟಕ ತಂಡಗಳಿಗೆ ಜಯ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST

ಭದ್ರಾವತಿ: ಕರ್ನಾಟಕ ತಂಡಗಳು ವನಿತೆಯರ ತಂಡವು ಇಲ್ಲಿ ಗುರುವಾರ ಆರಂಭವಾದ 41ನೇ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿವೆ.

ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡವು 35–27, 35–27ರಿಂದ ತೆಲಂಗಾಣ ವಿರುದ್ಧ ಜಯಿ ಸಿತು. ಇನ್ನೊಂದು ಪಂದ್ಯದಲ್ಲಿಯೂ ರಾಜ್ಯ ತಂಡವು 35–29, 29–35, 26–34 ರಿಂದ  ಆಂಧ್ರಪ್ರದೇಶದ ವಿರುದ್ಧ ಪ್ರಯಾಸ ಜಯ ಸಾಧಿಸಿತು.

ವನಿತೆಯರ ವಿಭಾಗದಲ್ಲಿ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲಿ 35–25, 35–13ರಿಂದ ಪುದುಚೇರಿ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ 35–12, 35–21ರಿಂದ  ಆಂಧ್ರಪ್ರದೇಶದ ವಿರುದ್ಧ ಗೆದ್ದಿತು. ರಾಜ್ಯ ವನಿತೆಯರು ಇನ್ನೊಂದು ಪಂದ್ಯದಲ್ಲಿ 35–12, 35–10ರಿಂದ ತೆಲಂಗಾಣ ವಿರುದ್ಧ ಗೆಲುವು ದಾಖಲಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.